ಅಸಭ್ಯ ವರ್ತನೆ: ಭಾರತೀಯ ಎಂಜಿನಿಯರ್‌ಗೆ ಶಿಕ್ಷೆ

7

ಅಸಭ್ಯ ವರ್ತನೆ: ಭಾರತೀಯ ಎಂಜಿನಿಯರ್‌ಗೆ ಶಿಕ್ಷೆ

Published:
Updated:

ಷಿಕಾಗೊ (ಐಎಎನ್‌ಎಸ್): ವಿಮಾನದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಭಾರತೀಯ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಅಮೆರಿಕ ಕೋರ್ಟ್ ಶಿಕ್ಷೆ ವಿಧಿಸಿದೆ. ಲಾಸ್‌ವೇಗಾಸ್‌ನಿಂದ ಷಿಕಾಗೊಗೆ ಬರುತ್ತಿದ್ದ ವಿಮಾನದ ಪಕ್ಕದ ಸೀಟಿನಲ್ಲಿ ನಿದ್ರಿಸುತ್ತಿದ್ದ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಶ್ರೀನಿವಾಸ ಎಸ್. ಎರ‌್ರಾಮಿಲ್ಲಿ (45)ಯನ್ನು ಕೋರ್ಟ್ ತಪ್ಪಿತಸ್ಥ   ಎಂದು ಘೋಷಿಸಿದ್ದು, ಈ ಅಪರಾಧಕ್ಕಾಗಿ ಎರಡು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.ಷಿಕಾಗೊ ಟ್ರಿಬ್ಯೂನ್ ಪತ್ರಿಕೆ ಈ ವರದಿ ಮಾಡಿದೆ. 1999ರಲ್ಲಿ ಡೆಟ್ರಾಯಿಟ್‌ನಿಂ ಷಿಕಾಗೊಗೆ ಬರುತ್ತಿದ್ದ ವಿಮಾನದಲ್ಲೂ ಶ್ರೀನಿವಾಸ ಮಹಿಳೆಯೊಬ್ಬರ ವಕ್ಷಸ್ಥಳವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದರು. ಆಗ ಕೋರ್ಟ್ ಶಿಕ್ಷೆ ವಿಧಿಸಿದ್ದರೂ ಅವರ ಮೇಲೆ ನಿಗಾ ಇಟ್ಟು ಜೈಲು ಶಿಕ್ಷೆಯಿಂದ ವಿನಾಯತಿ ನೀಡಲಾಗಿತ್ತು.2001ರಲ್ಲೂ  ನಂತರ ಸ್ಯಾನ್‌ಜೋಸ್‌ನಿಂದ ಡೆಟ್ರಾಯಿಟ್‌ಗೆ ಬರುತ್ತಿದ್ದ ವಿಮಾನದಲ್ಲೂ ಶ್ರೀನಿವಾಸ್ ಹೀಗೆ ವರ್ತಿಸಿದ್ದರು. ಆಗಲೂ, ಅವರ ನಡವಳಿಕೆ ಮೇಲೆ ಕಣ್ಣಿಟ್ಟು ಅವರನ್ನು ಬಿಡುಗಡೆ ಮಾಡಲಾಗಿತ್ತು.  ಇದು ಮೂರನೇ ಬಾರಿ ಅವರು ಹೀಗೆ ವರ್ತಿಸಿದ್ದರಿಂದ ಈ ಬಾರಿ ಕಡ್ಡಾಯವಾಗಿ ಶಿಕ್ಷೆ ವಿಧಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry