ಶನಿವಾರ, ಜನವರಿ 18, 2020
26 °C
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಹೇಳಿಕೆ

ಅಸಮರ್ಥ ಸಚಿವರು: ಸಿಎಂ ಜೊತೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೆಲವು ಸಚಿವರ ಅಸಮರ್ಥತೆ ಬಗ್ಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿ­ಸಿರುವ ಹಿನ್ನೆಲೆ­ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗು­ವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.ನಗರದಲ್ಲಿ ಗುರುವಾರ ಪತ್ರಕರ್ತ­ರೊಂದಿಗೆ ಮಾತನಾಡಿ, ಕಬ್ಬು ಬೆಳೆ­ಗಾರರ ಹಿತ ಕಾಯಲು ಸರ್ಕಾರ ಬದ್ಧ­ವಾಗಿದ್ದು, ಸರ್ಕಾರದ ಆದೇಶ ಪಾಲಿ­ಸ­ದಿದ್ದರೆ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳು­ವುದು ಅನಿ­ವಾರ್ಯ­ವಾಗಲಿದೆ. ಕಾನೂನಿ­ಗಿಂತ ಯಾರೂ ದೊಡ್ಡವರಲ್ಲ ಎಂದರು.ಎಸ್‌.ಆರ್‌.ಹಿರೇಮಠ ಅವರು ಜನಪ್ರತಿನಿಧಿಗಳ ವಿರುದ್ಧ ಎಲ್ಲೇಮೀರಿ ಮಾತನಾಡುತ್ತಿದ್ದಾರೆ. ಜನಪ್ರತಿನಿಧಿಗಳ ವಿರುದ್ಧ ಆರೋಪ ಮಾಡಲಿ. ಆದರೆ ಅವಹೇಳನಕಾರಿಯಾಗಿ ಮಾತನಾಡು­ವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.ಮುಂಬರುವ ಲೋಕಸಭೆ ಚುನಾ­ವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಸಂಭವ­ನೀಯ ಅಭ್ಯರ್ಥಿಗಳ ಪಟ್ಟಿಯನ್ನು ಡಿ. 15ರಂದು ಬೆಂಗಳೂರಿಗೆ ಆಗಮಿಸುವ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರಿಗೆ ಸಲ್ಲಿಸಲಾಗುವುದು  ಎಂದರು.

ಪ್ರತಿಕ್ರಿಯಿಸಿ (+)