ಅಸಮರ್ಪಕ ವಿದ್ಯುತ್ ಪೂರೈಕೆ: ಪ್ರತಿಭಟನೆ

ಬುಧವಾರ, ಜೂಲೈ 24, 2019
28 °C

ಅಸಮರ್ಪಕ ವಿದ್ಯುತ್ ಪೂರೈಕೆ: ಪ್ರತಿಭಟನೆ

Published:
Updated:

ಹೊಸನಗರ: ಇಪ್ಪತ್ತು ದಿನಗಳಿಂದ ತಾಲ್ಲೂಕಿನಾದ್ಯಂತ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಸೋಮವಾರ ಇಲ್ಲಿನ ಮೆಸ್ಕಾಂ  ಕಚೇರಿಗೆ ಸಾರ್ವಜನಿಕರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಸಾಗರದಿಂದ ಹೊಸನಗರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33 ಕೆ.ವಿ. ಮಾರ್ಗದ ನಿರ್ವಹಣೆ ಹೊತ್ತಿರುವ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಕಾರಣ ಪ್ರತಿಭಟನಾಕಾರರು ದೂರಿದರು.ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್ ಕಾಮತ್ ಮಾತನಾಡಿ, ಸಾಗರ-ಹೊಸನಗರ ಮಾರ್ಗದಲ್ಲಿರುವ ಮರಗಳ ಅಡಚಣೆಯಿಂದ ಈ ತೊಂದರೆ ಆಗುತ್ತಿದೆ. ಮಾರ್ಗದ ಗುತ್ತಿಗೆದಾರರ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.ಹೊಸನಗರ-ಸಾಗರ 33 ಕೆ.ವಿ. ಮಾರ್ಗವು ಅತ್ಯಂತ ಹಳೆಯದಾಗಿದ್ದು,  ಇದರ ನವೀಕರಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದರು.ವಿವಿಧ ಪಕ್ಷದ ಮುಖಂಡರು, ಗ್ರಾಮಸ್ಥರು, ಸಂಘ-ಸಂಸ್ಥೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry