ಅಸಹಾಯಕರಿಗೆ ಆಸರೆಯಾದ ಈರಣ್ಣ

ಬುಧವಾರ, ಜೂಲೈ 17, 2019
25 °C

ಅಸಹಾಯಕರಿಗೆ ಆಸರೆಯಾದ ಈರಣ್ಣ

Published:
Updated:

ಶಿರಹಟ್ಟಿ: ಅದೊಂದು ಅಪರೂಪದ ಮದುವೆ. ಹುಡುಗ ಮತ್ತು ಹುಡುಗಿಯ ತಂದೆ ಇಲ್ಲ. ಇಬ್ಬರಿಗೂ ತಾಯಿ ಮಾತ್ರ ಇದ್ದು, ಮಕ್ಕಳ ಮದುವೆ ಮಾಡಲಾರದ ಅಸಹನೀಯ ಸ್ಥಿತಿ. ಮದುವೆಗೆ ದಿನವನ್ನು ನಿಗದಿ ಮಾಡಿದ್ದರೂ ಹಣಕಾಸಿನ ಸಮಸ್ಯೆಯಿಂದ ಮುಂದೂಡುವ ಪರಸ್ಥಿತಿ. ಹಣ ಕೊರತೆಯಿಂದ ಸಂಬಂಧ ಬೇರ್ಪಡುವ ಬೇರೆ ಭಯ ಹಿರಿಯರಿಗೆ. ಅವರ ಮನಸ್ಥಿಯನ್ನು ಅರಿತ ಯುವಕನೊಬ್ಬ ತನ್ನದೆ ಆದ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆ ಮಾಡಿ ಮಾನವೀಯತೆ ಮೆರದ.ಇದು ಯಾವದೇ ಚಲನಚಿತ್ರದ ಚಿತ್ರಕತೆ ಅಥವಾ ಧಾರಾವಾಹಿಯಂತೂ ಖಂಡಿತ ಅಲ್ಲ. ತಾಲೂಕಿನ ಜಲ್ಲಿಗೇರಿ ಗ್ರಾಮದಲ್ಲಿ ನಡೆದ ನೈಜ ಘಟನೆ. ಜಲ್ಲಿಗೇರಿ ಗ್ರಾಮದ ಶಿವಶಂಕರಪ್ಪ ದುರುಗಪ್ಪ ಲಮಾಣಿ ಮತ್ತು ಶಿಲ್ಪಾ ಸುಭಾಸ ಪವಾರ ನೂತನ ವಧುವರರನ್ನು ಗ್ರಾಮದ ಯುವಕ ಈರಣ್ಣ ಧರ್ಮಪ್ಪ ಚವ್ಹಾಣ ತನ್ನ ಮನೆ ಮುಂದೆ ಭರ್ಜರಿಯಾಗಿ ಮದುವೆ ಮಾಡಿ ಆದರ್ಶವನ್ನು ಮೆರದು ಎಲ್ಲರಿಗೂ ಮಾದರಿಯಾಗಿದ್ದಾನೆ.ಗ್ರಾಮಸ್ಥರ ಸಹಕಾರದೊಂದಿಗೆ ವಿಧ ವಿಧದ ಭಕ್ಷ್ಯಬೋಜನಗಳೊಂದಿಗೆ ಗ್ರಾಮದ ಯುವಕರ ನೆರವಿನಿಂದ ಸಾವಿರಾರು ಜನರಿಗೆ ಉಣಬಡಿಸಿ ಜನ ಮೆಚ್ಚುವಂತೆ ವಿವಾಹದ ಪ್ರಕ್ರಿಯೆ ಪೂರ್ಣಗೊಳಿಸಿದ ಈರಣ್ಣನ ಕಾರ್ಯ ಶ್ಘಾಘನೀಯವಾದದು.ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವದರ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾದ ಈರಣ್ಣ ಚವ್ಹಾಣ ಕಾರ್ಯಸಾಧನೆಯನ್ನು ಮೆಚ್ಚಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಪುತ್ರ ಲೋಕೇಶ, ಈರಯ್ಯ ಹಿರೇಮಠ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗುರಪ್ಪ ಲಮಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೀಪಕ್ ಲಮಾಣಿ, ತಾಲೂಕ ಪಂಚಾಯತ್ ಸದಸ್ಯೆ ಫಕೀರವ್ವ ಮುಂಡವಾಡ, ಸಿದ್ದಪ್ಪ ಕಟ್ಟೆಕಾರ,ರಮೇಶ ಲಮಾಣಿ, ಯಲ್ಲಪ್ಪ ಜೋಗೇರ, ಶ್ರೀನಿವಾಸ ಬಾರ್ಬರ ಮತ್ತಿತರರು ಈ ಸಂದರ್ಭದಲ್ಲಿ ಆಗಮಿಸಿ ದಂಪತಿಗೆ ಶುಭ ಹಾರೈಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry