ಅಸಾರಾಮ್‌ಗೆ 18 ಕೋಟಿ ರೂಪಾಯಿ ದಂಡ

7
ಭೂ ಅತಿಕ್ರಮಣ

ಅಸಾರಾಮ್‌ಗೆ 18 ಕೋಟಿ ರೂಪಾಯಿ ದಂಡ

Published:
Updated:

ಸೂರತ್ (ಪಿಟಿಐ): ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ವಿವಾದದಲ್ಲಿ ಸಿಲುಕಿರುವ ಅಸಾರಾಮ್ ಬಾಪುಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.ಗುಜರಾತ್‌ನ ಜಹಾಂಗೀರ್‌ಪುರದಲ್ಲಿಯ ಕೊಟ್ಯಂತರ ರುಪಾಯಿ ಮೌಲ್ಯದ  ಸಾರ್ವಜನಿಕ ಆಸ್ತಿಯನ್ನು ತಮ್ಮ ಆಶ್ರಮಕ್ಕಾಗಿ ಅತಿಕ್ರಮಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಇದು ಹಳೆಯ ಪ್ರಕರಣವಾಗಿದ್ದು ಪ್ರತಿ ತಿಂಗಳು 70 ಸಾವಿರ ರೂಪಾಯಿ ದಂಡ ವಿಧಿಸುವಂತೆ ಹೈಕೊರ್ಟ್ ಆದೇಶಿಸಿತ್ತು.ಈ ಆದೇಶವನ್ನು ಪಾಲಿಸಲು ಅಸಾರಾಮ್ ವಿಫಲರಾಗಿದ್ದರು. ಇದೀಗ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ಅಸಾರಾಮ್‌ಗೆ 18 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry