ಅಸಾರಾಮ್ ನ್ಯಾಯಾಂಗ ವಶದ ಅವಧಿ ವಿಸ್ತರಣೆ

7

ಅಸಾರಾಮ್ ನ್ಯಾಯಾಂಗ ವಶದ ಅವಧಿ ವಿಸ್ತರಣೆ

Published:
Updated:
ಅಸಾರಾಮ್ ನ್ಯಾಯಾಂಗ ವಶದ ಅವಧಿ ವಿಸ್ತರಣೆ

ಜೋಧಪುರ್ (ಪಿಟಿಐ): ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರ ನ್ಯಾಯಾಂಗ ವಶದ ಅವಧಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಮತ್ತೆ 14 ದಿನಗಳ ಕಾಲ ವಿಸ್ತರಿಸಿದೆ.

ಅಸಾರಾಮ್ ಹಾಗೂ ಅವರ ಆಪ್ತ ಶಿವ ಅವರನ್ನು ಪೊಲೀಸರು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಎದುರು  ಹಾಜರು ಪಡಿಸಿದ ವೇಳೆ ನ್ಯಾಯಾಧೀಶ ಮನೋಜ್ ಕುಮಾರ್ ವ್ಯಾಸ್, ಅವರ ನ್ಯಾಯಾಂಗ ವಶದ ಅವಧಿಯನ್ನು ವಿಸ್ತರಿಸಿದರು.

ಈವೇಳೆ,  ಜೈಲಿನಲ್ಲಿ ತಮ್ಮ ವೈದ್ಯರ ಭೇಟಿಗೆ ಅವಕಾಶ ನೀಡುವಂತೆ 72 ವರ್ಷದ ಅಸಾರಾಮ್ ಮನವಿ ಮಾಡಿದರು. ಆದರೆ ಪ್ರತಿವಾದಿ ವಕೀಲರು ಗೈರು ಹಾಜರಾದ್ದರಿಂದ ನ್ಯಾಯಾಧೀಶರು, ಅಸಾರಾಮ್ ಮನವಿ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದರು.

ಈ ನಡುವೆ ಅಸಾರಾಮ್ ಪರ ವಕೀಲ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿ ಸೋಮವಾರ (ಇಂದು) ವಿಚಾರಣೆಗೆ ಬರಲಿದೆ.

ಜೋಧಪುರ್ ಆಶ್ರಮದಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸೆಪ್ಟೆಂಬರ್ ಒಂದರಂದು ಅಸಾರಾಮ್ ಅವರು ಬಂಧನಕ್ಕೆ ಒಳಗಾಗಿದ್ದರು. ಅಸಾರಾಮ್ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry