ಅಸೀಮ್ ತ್ರಿವೇದಿ ಉಪವಾಸ ಸತ್ಯಾಗ್ರಹ ಅಂತ್ಯ

7

ಅಸೀಮ್ ತ್ರಿವೇದಿ ಉಪವಾಸ ಸತ್ಯಾಗ್ರಹ ಅಂತ್ಯ

Published:
Updated:

ನವದೆಹಲಿ (ಪಿಟಿಐ): ವಿವಾದಾತ್ಮಕ ವ್ಯಂಗ್ಯಚಿತ್ರದ ಕಾರಣ ರಾಷ್ಟ್ರದ್ರೋಹದ ಆಪಾದನೆ ಮೇಲೆ ಇತ್ತೀಚೆಗೆ ಬಂಧಿತರಾಗಿದ್ದ ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ ಅವರು, ಅಸಂವಿಧಾನಿಕ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಶನಿವಾರ ಅಂತ್ಯಗೊಳಿಸಿದರು.ಇಲ್ಲಿನ ಜಂತರ್- ಮಂತರ್ ಮುಂದೆ ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಗ್ರಾಹ ನಡೆಸುತ್ತಿದ್ದ ಅವರು, `ಆಮ್ ಆದ್ಮಿ' ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಮನವಿಯಂತೆ ಉಪವಾಸವನ್ನು ಕೈಬಿಟ್ಟರು. ತ್ರಿವೇದಿ ಅವರ ಸಹೋದ್ಯೋಗಿ ಅಲೋಕ್ ದೀಕ್ಷಿತ್ ಕೂಡ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry