ಅಸೂಯೆ ಬೇಡ ಉಲ್ಲಾಸ ಇರಲಿ

7

ಅಸೂಯೆ ಬೇಡ ಉಲ್ಲಾಸ ಇರಲಿ

Published:
Updated:

ನಿಮ್ಮ  ಬದುಕನ್ನು ಮತ್ತಷ್ಟು ಆಳವಾಗಿಸಿ. ನಿಮ್ಮ ಕೇಂದ್ರದೊಳಗೆ ಬನ್ನಿ. ನಿಮ್ಮದೇ ಬದುಕು ಸೃಷ್ಟಿಸಿಕೊಳ್ಳಿ. ನಿಮಗೆ ಬೇಕಾದ ಕೆಲಸಗಳನ್ನಷ್ಟೇ ಮಾಡಿ. ಅದನ್ನು ನಿಮ್ಮ ವಿಧಾನದಲ್ಲೇ ಮಾಡಿ. ನಿಮ್ಮ ಕಾಲ ಕೆಳಗಿನ ಹುಲ್ಲಿನ ಸ್ಪರ್ಶ ಹಾಗೂ ಮುಖಕ್ಕೆ ಬೀಸುವ ತಂಗಾಳಿಯ ಕಂಪನ್ನು ಅನುಭವಿಸಲು ವಾಕ್‌ ಮಾಡಿ. ತೂಕ ಕಡಿಮೆ ಮಾಡುವ ಉದ್ದೇಶದಿಂದ ವಾಕ್‌ ಮಾಡುವುದು ಬೇಡ.ಕಚೇರಿ ಕೆಲಸಕ್ಕಾಗಿ ಸಭೆ ಮಾಡಲು ದುಬಾರಿ ಉಪಾಹಾರಗೃಹಕ್ಕೆ ಹೋಗುವುದು ಬೇಡ. ಉದ್ಯಾನದಲ್ಲಿ ಕುಳಿತು ಸ್ಯಾಂಡ್‌ವಿಚ್‌ ತಿನ್ನುತ್ತ ಮಾತುಕತೆ ನಡೆಸಿ.ಸ್ಫೂರ್ತಿ ತುಂಬುವ ಪುಸ್ತಕಗಳನ್ನು ಓದಿ. ಧ್ಯಾನ ಮಾಡಿ.  ಕಲಾಕೃತಿಗಳನ್ನು ರಚಿಸಿ, ಬರೆಯಿರಿ, ಪ್ರಾರ್ಥಿಸಿ. ಗೋಡೆಯ ಮೇಲೆ ಬದುಕುವಾಗ ನೀವು ನಿಮ್ಮ ಅಹಂಕಾರದ ಆಧಾರದಲ್ಲಿ ಬದುಕುತ್ತಿರುತ್ತೀರಿ. ಕೇಂದ್ರದಲ್ಲಿ ಇರುವಾಗ ಅಹಂಕಾರವನ್ನು ಸುಲಭವಾಗಿ ಬಿಡಲು ಸಾಧ್ಯವಾಗುತ್ತದೆ. ನೀವು ಅಹಂಕಾರವನ್ನು ಬಿಟ್ಟಾಗ ಮತ್ತಷ್ಟು ಸಂತಸದಿಂದ, ಉಲ್ಲಾಸದಿಂದ ಇರುತ್ತೀರಿ.ಯಾವಾಗಲೂ ಕೇಂದ್ರದಲ್ಲೇ ಇರಿ. ಗೋಡೆಗೆ ಅಂಟಿಕೊಳ್ಳುವ ಸಂದರ್ಭಗಳನ್ನು ಕಡಿಮೆ ಮಾಡಿಕೊಳ್ಳಿ. ಆಗ ಯಾರಾದರೂ ಕೆಣಕಿದಾಗಲೂ ಶಾಂತವಾಗಿ ಇರಲು ಸಾಧ್ಯವಾಗುತ್ತದೆ. ಅಸೂಯೆ ಬೇಡ. ಉಲ್ಲಾಸ ಇರಲಿ. ನಿಮ್ಮ ಮಾಧುರ್ಯ ಸದಾ ಹರಿಯುತ್ತಿರಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry