ಅಸ್ಪಶ್ಯತೆ ನಿವಾರಣೆ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

7

ಅಸ್ಪಶ್ಯತೆ ನಿವಾರಣೆ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

Published:
Updated:

ಮಡಿಕೇರಿ: 2012ನೇ ಸಾಲಿನಲ್ಲಿ ಏಪ್ರಿಲ್ 5ರಂದು ಡಾ. ಬಾಬು ಜಗಜೀವನ್‌ರಾಂ ಅವರ 105ನೇ ಹಾಗೂ ಏಪ್ರಿಲ್ 14 ರಂದು ಡಾ. ಬಿ.ಆರ್.ಅಂಬೇಡ್ಕರ್‌ರವರ 121 ನೇ ಜನ್ಮ ದಿನಾಚರಣೆ ಅಂಗವಾಗಿ ಅರ್ಹ ವ್ಯಕ್ತಿಗಳಿಗೆ ಸ್ಮರಣಾರ್ಥ ಪ್ರಶಸ್ತಿ ನೀಡಲು ಅರ್ಜಿಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸುವವರು ಹೊಂದಿರ ಬೇಕಾದ ಅರ್ಹತೆಗಳು: ಸಾಮಾಜಿಕ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಜನಾಂಗದ ಏಳಿಗೆ, ಅಸ್ಪಶ್ಯತೆ ನಿರ್ಮೂಲನೆ ಹಾಗೂ ದೌರ್ಜನ್ಯ ತಡೆಯುವ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಣೆಯಿಂದ ನಿರಂತರವಾಗಿ ತೊಡಗಿಸಿಕೊಂಡಿರಬೇಕು.ಒಬ್ಬ ವ್ಯಕ್ತಿ ಒಂದು ಪ್ರಶಸ್ತಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿದಾರರ ವಯಸ್ಸು ಕನಿಷ್ಟ 35 ವರ್ಷವಾಗಿರಬೇಕು. ಪ್ರಶಸ್ತಿಗೆ ಯಾವುದೇ ಜನಾಂಗದ ವ್ಯಕ್ತಿ ಅರ್ಜಿ ಸಲ್ಲಿಸಬಹುದು.  ಅರ್ಜಿಯನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಸುದರ್ಶನ್ ವೃತ್ತದ ಬಳಿ, ಕೊಡಗು ಜಿಲ್ಲೆ ಮಡಿಕೇರಿ (ದೂರವಾಣಿ ಸಂಖ್ಯೆ 08272-225531).ತಾಲ್ಲೂಕು ಸಮಾಜ ಕಲ್ಯಾಣಾಧಿ ಕಾರಿಗಳ ಕಚೇರಿ, ದೇಚೂರು, (ದೂ.08272-223552), ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಗಳ ಕಚೇರಿ, ಸೋಮವಾರಪೇಟೆ (ದೂ.08276-281115), ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಗಳ ಕಚೇರಿ, ಪೊನ್ನಂಪೇಟೆ (ದೂ.08274-249476) ಕಚೇರಿಗಳಲ್ಲಿ ಕೆಲಸದ ವೇಳೆ ಪಡೆಯಬಹುದಾಗಿದೆ.  ಅರ್ಜಿಯನ್ನು ಮಡಿಕೇರಿ ಜಿಲ್ಲಾ ಸಮಾಜ ಕಲ್ಯಾ ಣಾಧಿಕಾರಿ ಕಚೇರಿಗೆ ಫೆ.13ರ ಒಳಗೆ ಸಲ್ಲಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್ ಜಿ. ಗೌಡ ಅವರು ಕೋರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry