ಶನಿವಾರ, ಜೂನ್ 19, 2021
21 °C

ಅಸ್ಪೃಶ್ಯತೆಯ ಕೆಟ್ಟ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ ತಾಲೂಕಿನ ಕೆಲವು ಗ್ರಾಮಗಳಿಗೆ ಹೋದರೆ ಅಲ್ಲಿನ ಹೋಟೆಲ್, ದೇವಾಲಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗೆ (ಹೊಲೆಯ ಮತ್ತು ಮಾದಿಗ) ಸಮುದಾಯದ ಜನರಿಗೆ ನಿಷೇಧ ಇರುವುದನ್ನು ನೋಡಬಹುದು.

 

ಇದು ನಿಜಕ್ಕೂ ನೋವಿನ ಸಂಗತಿ. ತಾಲೂಕಿನ ಚಟಿಗೇರಿ, ಹೊಸಳ್ಳಿ, ಕೂಲೂರು, ಮುಷ್ಟೂರು, ಜಿನಕೇರಿ, ಗೌಡಗೇರಿ, ನಾಗರಬಂಡಿ, ಕೌಳೂರು, ಲಿಂಗೇರಿ, ಮಲ್ಹಾರ, ಸಾವೂರ, ಹೆಗ್ಗಣಗೇರಿ ಮತ್ತಿತರ ಗ್ರಾಮಗಳಲಿ ಸರ್ಕಾರದ, ಅಧಿಕಾರಿಗಳ ಮಾಧ್ಯಮಗಳ ಹಾಗೂ ದಲಿತ ಸಂಘಟನೆಗಳ ಅಂಜಿಕೆ ಇಲ್ಲದೆ ಅಸ್ಪೃಶ್ಯತೆ ಆಚರಣೆಯಾಗುತ್ತಿದೆ.ಈ ಹಳ್ಳಿಗಳ ದಲಿತರ ಕೇರಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ದಾಖಲೆಗಳಿಲ್ಲ. ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ ಎಂದು ಕಾನೂನು ಹೇಳುತ್ತದೆ. ಆದರೆ ಈ ಗ್ರಾಮಗಳಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ಈ ಗ್ರಾಮಗಳ ನಿರ್ಲಕ್ಷಿತ ದಲಿತರ ಉದ್ಧಾರ ಹೇಗೆ ಸಾಧ್ಯ. ಬುದ್ಧ, ಬಸವ ಅಂಬೇಡ್ಕರ್, ಜಗಜೀವನರಾಮ ಅವರ ಕನಸಿನ ಸಮಾನತೆ ಬರುವುದು ಯಾವಾಗ?ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಅಸ್ಪೃಶ್ಯತೆ ಆಚರಣೆ ಇರುವ ಹಳ್ಳಿಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು. ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.