ಬುಧವಾರ, ಜನವರಿ 22, 2020
20 °C

ಅಸ್ಪೃಶ್ಯತೆ ನಿವಾರಣೆ: ಅರಿವು ಮೂಡಿಸಲು ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಧಾನಿ, ಪ್ರಮುಖ ಸಚಿವರು ಹಾಗೂ ಮುಖ್ಯಮಂತ್ರಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಸಾರ್ವಜನಿಕರಲ್ಲಿ ಅಶ್ಪೃಶ್ಯತೆಯ ನಿವಾರಣೆಗಾಗಿ ವ್ಯಾಪಕ ಅರಿವು ಮೂಡಿಸಬೇಕು ಎಂದು ಸಾಮಾಜಿಕ ನ್ಯಾಯ ಸಚಿವಾಲಯದ 12ನೇ ಯೋಜನಾ ಕಾರ್ಯತಂಡವು ಸರ್ಕಾರಕ್ಕೆ ಶಿಫಾರಸು ಮಾಡಿದೆ.ಪರಿಶಿಷ್ಟ ಜಾತಿಗಳನ್ನು ಸಶಕ್ತರನ್ನಾಗಿಸುವುದರ ಮೇಲಿನ ತನ್ನ ವರದಿಯಲ್ಲಿ ತಂಡವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಶಾಹಿ ಆಡಳಿತ ಯಂತ್ರದಲ್ಲಿ ಅಸ್ಪೃಶ್ಯತೆಯ ಬಗ್ಗೆ ಗಂಭೀರತೆಯ ಮನೋಭಾವನೆ ಉಂಟುಮಾಡಿದಲ್ಲಿ ಮಾತ್ರ ಸುಧಾರಣಾ ಕ್ರಮಗಳು ವಿಸ್ತರಿಸುವುದು ಎಂದು ತಿಳಿಸಿದೆ.

ಪ್ರತಿಕ್ರಿಯಿಸಿ (+)