ಅಸ್ಸಾಂಜ್ ವಿರುದ್ಧ ಕಾನೂನು ಅಸ್ತ್ರ

7

ಅಸ್ಸಾಂಜ್ ವಿರುದ್ಧ ಕಾನೂನು ಅಸ್ತ್ರ

Published:
Updated:
ಅಸ್ಸಾಂಜ್ ವಿರುದ್ಧ ಕಾನೂನು ಅಸ್ತ್ರ

ಸಿಡ್ನಿ(ಎಎಫ್‌ಪಿ): ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಮೆರಿಕ ಮುಂದಾಗಿದೆ.  ಅಮೆರಿಕ ಮೂಲದ ಖಾಸಗಿ ಗುಪ್ತಚರ ಸಂಸ್ಥೆ ಸ್ಟ್ರಾಟ್‌ಫಾರ್‌ನ ಸುಮಾರು 50 ಲಕ್ಷಕ್ಕೂ ಹೆಚ್ಚು ಇ- ಮೇಲ್ ಬಹಿರಂಗಪಡಿಸಿದ ಬೆನ್ನಲ್ಲೇ ಅವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ.ಸ್ಟ್ರಾಟ್‌ಫಾರ್‌ನ ಉಪಾಧ್ಯಕ್ಷ ಫ್ರೆಡ್ ಬರ್ಟನ್ `ಅಸ್ಸಾಂಜ್ ವಿರುದ್ಧ ವಿಧಿವತ್ತಾದ ಕಾನೂನು ಕ್ರಮ ಜರುಗಿಸಲು ಅಗತ್ಯವಾದ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ~ ಎಂದು ತಿಳಿಸಿದ್ದಾರೆ. ತಮ್ಮ ಸಹೋದ್ಯೋಗಿಗೆ ಕಳಿಸಿದ ಇ-ಮೇಲ್ ಸಂದೇಶದಲ್ಲಿ ಈ ವಿಷಯ ಅವರು ತಿಳಿಸಿದ್ದಾರೆ. ಈ ವಿಷಯವನ್ನು ರಹಸ್ಯವಾಗಿ ಕಾಪಾಡುವಂತೆ ಮತ್ತು ಎಲ್ಲಿಯೂ ಬಹಿರಂಗ ಪಡಿಸದಂತೆ ಬರ್ಟನ್ ಪತ್ರದಲ್ಲಿ ಎಚ್ಚರಿಕೆ  ನೀಡಿದ್ದಾರೆ. 

ಲಾಡೆನ್ ಅಡಗುತಾಣ ಗೊತ್ತಿರಲಿಲ್ಲ: ಪಾಕ್

ಅಬೊಟ್ಟಾಬಾದ್‌ನಲ್ಲಿ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್‌ನ ಅಡಗುತಾಣದ ಬಗ್ಗೆ ಪಾಕಿಸ್ತಾನದ ಸೇನಾಧಿಕಾರಿಗಳು ಮತ್ತು ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ಮೊದಲೇ ಮಾಹಿತಿ ಇತ್ತು ಎಂಬ ವಿಕಿಲೀಕ್ಸ್ ವರದಿಯನ್ನು ಪಾಕಿಸ್ತಾನದ ಸೇನೆ ತಳ್ಳಿಹಾಕಿದೆ.ಲಾಡೆನ್ ಮತ್ತು ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳ ಮಧ್ಯೆ ಯಾವುದೇ ಸಂಪರ್ಕ ಇರಲಿಲ್ಲ ಎಂದು ಸೇನೆಯ ವಕ್ತಾರ ಮೇಜರ್ ಜನರಲ್ ಅಥರ್ ಸ್ಪಷ್ಟಪಡಿಸಿದ್ದಾರೆ. ವಿಕಿಲೀಕ್ಸ್ ಆರೋಪ ನಿರಾಧಾರವಾಗಿದ್ದು ಇದರಲ್ಲಿ ಹೊಸದೇನೂ ಇಲ್ಲ. ಆರೋಪಗಳು `ಹೊಸ ಬಾಟಲಿಯಲ್ಲಿ ಹಳೆಯ ಮದ್ಯ~ವಿದ್ದಂತೆ ಎಂದು ಲೇವಡಿ ಮಾಡಿದರು.ಐಎಸ್‌ಐ, ಸೇನೆಯ ಹಿರಿಯ ಅಧಿಕಾರಿಗಳಿಗೆ  ಲಾಡೆನ್ ಸುರಕ್ಷಿತ ರಹಸ್ಯ ತಾಣದ ಮಾಹಿತಿ ಇತ್ತು ಎಂಬ ಸ್ಟ್ರಾಟ್‌ಫಾರ್‌ನ ಉಪಾಧ್ಯಕ್ಷ ಫ್ರೆಡ್ ಬರ್ಟನ್ ಅವರ ಇ- ಮೇಲ್ ಹೇಳಿಕೆಯನ್ನು ವಿಕಿಲೀಕ್ಸ್ ಉಲ್ಲೇಖಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry