ಅಸ್ಸಾಂ ಮಾಜಿ ಡಿಜಿಪಿ ಬರುವಾ ಆತ್ಮಹತ್ಯೆ

7
ಶಾರದಾ ಚಿಟ್‌ಫಂಡ್‌ ಪ್ರಕರಣ

ಅಸ್ಸಾಂ ಮಾಜಿ ಡಿಜಿಪಿ ಬರುವಾ ಆತ್ಮಹತ್ಯೆ

Published:
Updated:

ಗುವಾಹಟಿ (ಪಿಟಿಐ): ಅಸ್ಸಾಂನ ಮಾಜಿ ಪೊಲೀಸ್‌ ಮಹಾ­ನಿರ್ದೇಶಕ ಶಂಕರ್‌ ಬರುವಾ ಬುಧವಾರ ಗುಂಡು ಹಾರಿಸಿ­ಕೊಂಡು ಆತ್ಮಹತ್ಯೆ ಮಾಡಿ­ಕೊಂಡಿ­ದ್ದಾರೆ. ಶಾರದಾ ಚಿಟ್‌ ಫಂಡ್‌ನ ಬಹುಕೋಟಿ ಹಗರಣಕ್ಕೆ ಸಂಬಂಧ­ಪಟ್ಟಂತೆ ಕಳೆದ ತಿಂಗಳು ಅವರ ನಿವಾಸ­ದಲ್ಲಿ ಸಿಬಿಐ ಶೋಧ ನಡೆಸಿತ್ತು.‘ಇಲ್ಲಿನ ತಮ್ಮ ನಿವಾಸದ ತಾರಸಿ­ಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ­ಕೊಂಡ ಬರುವಾ ಅವರನ್ನು ಕುಟುಂಬದ ಸದಸ್ಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಅವರು ಕೊನೆಯು­ಸಿರೆಳೆದರು. ತನಿಖೆ ಆರಂಭಗೊಂಡಿದೆ. ನಂತರವಷ್ಟೇ ಘಟ­ನೆಯ ಬಗ್ಗೆ ವಿವರ ನೀಡಲು ಸಾಧ್ಯ’ ಎಂದು ಗುವಾಹಟಿಯ ಹಿರಿಯ ಪೊಲೀಸ್‌ ಅಧೀಕ್ಷಕ ಎ.ಪಿ. ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಶಾರದಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ನಂತರ ಖಿನ್ನತೆ­ಗೊಳ­ಗಾ­ಗಿ­ದ್ದರು. ಕಳೆದ ವಾರ ಎದೆನೋವು ಕಾಣಿಸಿ­ಕೊಂಡು ಸ್ಥಳೀಯ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬುಧ­ವಾರ ಬೆಳಿಗ್ಗೆಯಷ್ಟೇ ಮನೆಗೆ ಕರೆತರ­ಲಾಗಿತ್ತು ಎಂದು ಬರುವಾ ಕುಟುಂಬದ ಮೂಲಗಳು ತಿಳಿಸಿವೆ.‘ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಅರ್ಧ ಗಂಟೆಯಲ್ಲಿ ಅವರು ಮನೆಯ ತಾರಸಿಗೆ ತೆರಳಿ ಪಿಸ್ತೂಲ್‌­ನಿಂದ ಗುಂಡು ಹಾರಿಸಿ­ಕೊಂಡರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಸಂಬಂಧಿಗಳು ತಿಳಿಸಿದ್ದಾರೆ.ಶಾರದಾ ಚಿಟ್‌ ಫಂಡ್‌ ಹಗರಣ­ದಲ್ಲಿ ಬರುವಾ ಅವರು ಶಾಮೀಲಾಗಿ­ರುವ ಬಗ್ಗೆ ಸುದ್ದಿವಾಹಿನಿಗಳಲ್ಲಿ ನಿರಂತರ­ವಾಗಿ ಪ್ರಸಾರವಾಗುತ್ತಿದ್ದ ವರದಿ­ಗಳಿಂದ ಅವರು ಬೇಸರಗೊಂಡಿ­ದ್ದರು ಎಂದು ಅವರು ಹೇಳಿದ್ದಾರೆ.ಆದರೆ, ಶಾರದಾ ಹಗರಣಕ್ಕೆ ಸಂಬಂ­ಧಿಸಿ ಬರುವಾ ಅವರನ್ನು ವಿಚಾರಣೆ­ಗೊಳ­ಪಡಿಸಿಲ್ಲ. ಅವರ ಬಂಧನಕ್ಕೆ ಸಮನ್ಸ್‌ ಕೂಡಾ ಜಾರಿಯಾಗಿಲ್ಲ ಎಂದು ಸಿಬಿಐನ ವಕ್ತಾರರು ಹೇಳಿದ್ದಾರೆ.ಶಾರದಾ ಚಿಟ್‌ ಫಂಡ್‌ ವ್ಯವಹಾರ­ದಲ್ಲಿ ವಂಚನೆ ಮಾಡಿದ್ದ ಅದೇ ಸಂಸ್ಥೆಯ ಸಿಬ್ಬಂದಿಯೋರ್ವನಿಗೆ ಬರುವಾ ರಕ್ಷಣೆ ನೀಡಿದ್ದರು ಎಂಬ ಆರೋಪ ಇತ್ತು.ಹಗರಣದ ಸಂಬಂಧ ಆಗಸ್ಟ್‌ 28ರಂದು ಅಸ್ಸಾಂನ ಇಬ್ಬರು ಮಾಜಿ ಸಚಿವರ ನಿವಾಸಗಳೂ ಸೇರಿದಂತೆ 12 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry