ಗುರುವಾರ , ಜನವರಿ 23, 2020
20 °C

ಅಹಮದ್‌ ನಗರ: ಸುಗ್ಗಿ ಕಣಕ್ಕೆ ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ:  ತಾಲ್ಲೂಕಿನ ಗಡಿ ಭಾಗವಾದ ಅಹಮದ್‌ ನಗರದ ರೈತರಿಗೆ ಸುಗ್ಗಿ ಮಾಡಲು ಕಣಗಳು ಇಲ್ಲದ ಕಾರಣ, ಮುಖ್ಯ ರಸ್ತೆಯಲ್ಲಿಯೇ ಸುಗ್ಗಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷವೂ ಸುಗ್ಗಿಯನ್ನು ಹೇಗೆ ಮಾಡಬೇಕು, ಬೆಳೆದ ವಿವಿಧ ಬೆಳೆಗಳನ್ನು ಹೇಗೆ ಸಂಗ್ರಹಿಸಿಕೊಳ್ಳಬೇಕು ಎನ್ನುವಂತಹ ಸಮಸ್ಯೆ ಇಲ್ಲಿನ ರೈತರನ್ನು ಕಾಡುತ್ತಿದೆ. ಐದಾರು ವರ್ಷಗಳ ಹಿಂದೆ ಸುಗ್ಗಿ ಮಾಡುತ್ತಿದ್ದ ಕಣದ ಜಾಗದಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿ ಗೋಕಟ್ಟೆ ನಿರ್ಮಿಸಿದೆ. ಇದರಿಂದ ಸಮಸ್ಯೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.‘ಗ್ರಾಮಕ್ಕೆ ರಸ್ತೆ, ಚರಂಡಿ, ವಿದ್ಯುತ್‌, ಶುದ್ಧ ಕುಡಿಯುವ ನೀರಿನಂತಹ ಮೂಲಸೌಕರ್ಯ  ನೀಡದೇ, ಒಂದು ಹನಿ ನೀರು ನಿಲ್ಲದಂತಹ ಸ್ಥಳದಲ್ಲಿ ಗೋಕಟ್ಟೆ ನಿರ್ಮಿಸಿದ್ದಾರೆ. ಇದರಿಂದ ಸರ್ಕಾರದ ಲಕ್ಷಾಂತರ ₨ ಅಪವ್ಯಯವಾಗಿದೆ. ಎರಡು

ವರ್ಷಗಳ ಹಿಂದೆಯೇ ರೈತರಿಗೆ ಸುಗ್ಗಿ ಮಾಡಲು ಕಣದ ಸಮಸ್ಯೆ ಎದುರಾಗಿದೆ ಎಂದು ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದರೂ, ರೈತರ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ’ ಎನ್ನುತ್ತಾರೆ ಪೀರ್‌ಸಾಬ್‌.ರೈತರು ಸರದಿಯಂತೆ ರಸ್ತೆಯಲ್ಲಿಯೇ ಸುಗ್ಗಿ ಮಾಡಿಕೊಳ್ಳುವಂತಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಮ್ಮನ್ನು ನಿಂದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಾಹನಗಳು ಜೋರಾಗಿ ಹೋದಾಗ ರಾಗಿಯ ಕಾಳು ರಸ್ತೆಯಿಂದ ಹೊರಗೆ ಸಾಕಷ್ಟು ಸಿಡಿಯುತ್ತಿವೆ. ಒಂದರ ಮೇಲೊಂದರಂತೆ ವಾಹನಗಳು ಸಂಚರಿಸುತ್ತಿರುವುದರಿಂದ ಎಲ್ಲಿ ಅಪಘಾತ ಸಂಭವಿಸುತ್ತದೆಯೋ ಎಂಬ ಭೀತಿ ಕಾಡುತ್ತಿದೆ ಎನ್ನುತ್ತಾರೆ ಸುಗ್ಗಿಯಲ್ಲಿ ನಿರತರಾಗಿರುವವರು.ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಈ ಬಗ್ಗೆ ಕಾಳಜಿ ವಹಿಸಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)