ಅಹಿಂದ ಜನರ ಏಳಿಗೆ ಕಾಂಗ್ರೆಸ್ ಗುರಿ

7

ಅಹಿಂದ ಜನರ ಏಳಿಗೆ ಕಾಂಗ್ರೆಸ್ ಗುರಿ

Published:
Updated:

ಬಾಣಾವರ: `ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯ ಕರ್ತರು ಹೊರಾಟದ ಭಾವನೆ ಬೆಳಸಿಕೊಂಡರೆ ಮಾತ್ರ ಪಕ್ಷ ಸಧೃಡವಾಗಿ ಬೆಳೆದು ಅಧಿಕಾರ ಪಡೆಯಲು ಸಾಧ್ಯ~ ಎಂದು ಮಾಜಿ ಶಾಸಕ ಬಿ.ಶಿವರಾಂ ತಿಳಿಸಿದರು.ಪಟ್ಟಣದ ಹನುಮಾನ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ವಿಭಾಗದ ಹಾಗೂ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್‌ನಿಂದ ಮಾತ್ರ ಎಲ್ಲ ವರ್ಗದ ಜನರ ಅಭಿವೃದ್ಧಿ ಸಾಧ್ಯ. ಅಹಿಂದ ವರ್ಗಗಳು ಸಂಘಟಿತ ರಾದಾಗ ರಾಜ ಕೀಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು.ಯುವಕರು ಕಾಂಗ್ರೆಸ್‌ಗೆ ಬರಬೇಕು. ಬದಲಾವಣೆಗೆ ನಮ್ಮೂಂ ದಿಗೆ ಕೈಜೋಡಿಸಬೇಕು. ಕಾಂತ್ರಿಕಾರಕ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು.ಬೂತ್ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡು ವುದರ ಮೂಲಕ ಪಕ್ಷ ಸಂಘಟನೆಯಲ್ಲಿ ಎಲ್ಲ ವರ್ಗದ ಜನರು ಸಕ್ರಿಯವಾಗಿ ರುವಂತೆ ಮಾಡಬೇಕು. ರೈತರ ಕಾಳಜಿ ಹಾಗೂ ನೀರಾವರಿಗೆ ಆದ್ಯತೆ ನೀಡುವ ಜನಪ್ರತಿನಿಧಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.ಪಕ್ಷದ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸಿದೆ. ಕಾಂಗ್ರೆಸ್ ಚಿಂತನೆ ಜನಪರವಾಗಿದೆ. ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಟ್ಟಿ ಬಿಡುಗಡೆ ಮಾಡಲಾ ಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ವಿಜಿಕುಮಾರ್, ಕೆಪಿಸಿಸಿ ಸದಸ್ಯರಾದ ರೇವಣ್ಣ, ಶಿವಶಂಕರ್ ಸ್ವಾಮಿ, ಕಡಕಡಿಪೀರಾ ಸಾಬ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೇವೇಂದ್ರಪ್ಪ, ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಸುಲೋಚನಾ, ಸೌಭಾಗ್ಯಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಮೇಶ್, ಮಹಿಳಾಧ್ಯಕ್ಷೆ ಭಾಗ್ಯ, ನಗರ ಘಟಕ ಅಧ್ಯಕ್ಷ ಉಮಾಶಂಕರ್, ಗಂಗೂರು ವಸಂತ್, ಜಾವಗಲ್ ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮಿ, ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬೆಳುವಳ್ಳಿ ಮಹದೇವಪ್ಪ, ಗೌಸಖಾನ್, ಗಂಗೂರು ರವಿ ಬಿ.ಡಿ. ಮಲ್ಲಿಕಣ್ಣ, ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಬಿ.ಆರ್. ಉಮೇಶ್ ಭಾಗವಹಿಸಿದ್ದರು.ಬಿ.ಸಿ.ಶ್ರೀನಿವಾಸ ಸ್ವಾಗತಿಸಿ, ಚಂದ್ರಣ್ಣ ವಂದಿಸಿ, ಸಂಘಟನಾ ಕಾರ್ಯದರ್ಶಿ ಜಯರಾಂ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry