ಅಹಿಂಸೆಯಿಂದಷ್ಟೇ ಶಾಂತಿ

7

ಅಹಿಂಸೆಯಿಂದಷ್ಟೇ ಶಾಂತಿ

Published:
Updated:

ಬೆಂಗಳೂರು: `ಅಹಿಂಸೆಯಿಂದ ಮಾತ್ರ ಜಗತ್ತು ಶಾಂತಿ ಕಂಡುಕೊಳ್ಳಲು ಸಾಧ್ಯವಿದೆ~ ಎಂದು ಮಹಾತ್ಮ ಗಾಂಧೀಜಿಯ ಮೊಮ್ಮಗಳಾದ ಸುಮಿತ್ರಾ ಗಾಂಧಿ ಕುಲಕರ್ಣಿ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯವು ನಗರದಲ್ಲಿ ಮಂಗಳವಾರ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ರಾಜಕಾರಣಿಗಳು ಗಾಂಧಿಯ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿ ಮರೆಯುವ ಬದಲು ಪ್ರಮಾಣ ಮಾಡದೇ ಇರುವುದು ಉತ್ತಮ. ಸುಳ್ಳು ಹೇಳುವ ಪ್ರವೃತ್ತಿ ಮತ್ತು ಹಿಂಸೆ ಪ್ರಕರಣಗಳಿಂದ ಜನತೆ ರೋಸಿಹೋಗದೇ ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯನ್ನು ಕಾಣಬಹುದು~ ಎಂದು ತಿಳಿಸಿದರು.  `ಸಮಯ ಕೊಲ್ಲುವ ಚಟುವಟಿಕೆಗಳಲ್ಲಿ ಪಾಲೊಳ್ಳದೇ ಶ್ರದ್ಧೆ ಮತ್ತು ಗಂಭೀರತೆಯನ್ನು ಯುವ ಜನತೆ ಅಳವಡಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು.ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್, `ಗಾಂಧೀಜಿಯ ತತ್ವ ಸಿದ್ಧಾಂತಗಳು ಭಾರತಕ್ಕೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಪ್ರಸ್ತುತ. ರಾಜಕಾರಣಿಗಳು ಅಧಿಕಾರಕ್ಕೆ ಬಂದ ಮೇಲೆ ಗಾಂಧಿಯ ಅಹಿಂಸಾ ತತ್ವವನ್ನು ಮರೆಯುತ್ತಿದ್ದಾರೆ~ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನ್‌ಕುಮಾರ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry