ಅಹೋರಾತ್ರಿ ಸಂಗೀತ ನೃತ್ಯೋತ್ಸವ

7

ಅಹೋರಾತ್ರಿ ಸಂಗೀತ ನೃತ್ಯೋತ್ಸವ

Published:
Updated:

ವಿದ್ವಾನ್ ನರಸಿಂಹಯ್ಯ ಮತ್ತು ವಿದ್ವಾನ್ ವೆಂಕಟೇಶ್ ವೃಂದದಿಂದ ನಾದಸ್ವರ-ಡೋಲು. ಕಲಾಮಂಡಲಂ ಉಷಾ ದಾತಾರ್ ನಿರ್ದೇಶನದಲ್ಲಿ ದಾತಾರ್ ಇನ್ಸ್‌ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ಕಲಾವಿದರಿಂದ ಸೋಮವಾರ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ನೃತ್ಯ. ಶ್ರೀಶಕ್ತಿ ಡಾನ್ಸ್ ಸ್ಕೂಲ್ ಕಲಾವಿದರು, ಮಿತುನ್ ಶಕ್ತಿ ಹಾಗೂ ನಿತಿನ್ ಶಕ್ತಿ ಅವರಿಂದ ಭರತನಾಟ್ಯ.

 

ವಿದುಷಿ ಶಮಾ ಕೃಷ್ಣ ಮತ್ತು ವೃಂದದಿಂದ ಕೂಚುಪುಡಿ ಮತ್ತು ಭರತನಾಟ್ಯ. ವಿದುಷಿ ಜಿ.ಎಸ್. ರಾಜಲಕ್ಷ್ಮಿ ನಿರ್ದೇಶನದಲ್ಲಿ ನಟರಾಜ ನೃತ್ಯ ಶಾಲಾ ಕಲಾವಿದರಿಂದ ಭರತನಾಟ್ಯ. ರಾಜ್ ಇನ್ಸ್‌ಟಿಟ್ಯೂಟ್ ಆಫ್ ಡಾನ್ಸ್ ಮತ್ತು ಕೊರಿಯಾಗ್ರಫಿ ಕಲಾವಿದರಿಂದ ನೃತ್ಯ ವೈವಿಧ್ಯ.

 

ವಿದುಷಿ ವಸುಂಧರಾ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ವಿದ್ವಾನ್ ಬೆಟ್ಟ ವೆಂಕಟೇಶ್ ನಿರ್ದೇಶನದಲ್ಲಿ ನಾದ ತರಂಗಿಣಿ ಕಲಾವಿದರಿಂದ ತಾಳವಾದ್ಯ ಸಂಗೀತ. ಬೆಳಗಿನ ಜಾವ ಕರ್ನಾಟಕ ಕಲಾದರ್ಶಿನಿ ಕಲಾವಿದರಿಂದ ಶ್ರಿನಿವಾಸ ಸಾಸ್ತಾನ ನಿರ್ದೇಶನದಲ್ಲಿ  ಭೂಕೈಲಾಸ ಯಕ್ಷಗಾನ ಪ್ರಸಂಗ. ಅಹೋರಾತ್ರಿ ಸಂಗೀತ ನೃತ್ಯೋತ್ಸವಕ್ಕೆ ಪ್ರವೇಶ ಉಚಿತ.ಸ್ಥಳ: ಗಾಯತ್ರಿ ದೇವಸ್ಥಾನ, ಯಶವಂತಪುರ ಬಸ್ ನಿಲ್ದಾಣದ ಹತ್ತಿರ. ಮಾಹಿತಿಗೆ: 23375666 ಮೊಬೈಲ್: 9972300090.

ದಿ ವಚನ ಬ್ಯಾಂಡ್

ಹನ್ನೆರಡನೇ ಶತಮಾನದ ವಚನಗಳನ್ನು ಶಾಸ್ತ್ರೀಯ ರಾಗ ಸಂಗೀತದಲ್ಲಿ ಕೇಳಿದ್ದೀರಿ. ಈ ವಚನಗಳನ್ನು ಜನಪದ ಹಾಗೂ ಆಧುನಿಕ ಶೈಲಿಯಲ್ಲಿ ಹಾಡಿ ಹೆಸರಾಗಿರುವ `ದಿ ವಚನ ಬ್ಯಾಂಡ್~ ಶಿವರಾತ್ರಿ ಪ್ರಯುಕ್ತ ಸೋಮವಾರ ನಾಗಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದಾರೆ.

 

ವಚನ ಕ್ರಾಂತಿಯಲ್ಲಿನ ಮುಕ್ತ ಮನೋಧರ್ಮ ಸಂಗೀತ ದಲ್ಲಿಯೂ ವ್ಯಕ್ತವಾಗುವ ಅನುಭವವನ್ನು ನೀಡಲಿದ್ದಾರೆ. ಸಿನಿಮಾ ಮತ್ತು ಟೀವಿ ಖ್ಯಾತಿಯ ಸುಪ್ರಿಯಾ ಆಚಾರ್ಯ, ಎಸ್. ಆರ್. ರಾಮಕೃಷ್ಣ, ಕ್ಯಾಲೇಬ್ ಅಲೆಕ್ಸಾಂಡರ್ ಮತ್ತು ಜೋ ಆಂಥೋನಿ ಅವರನ್ನೊಳಗೊಂಡ ತಂಡ ಬಸವಣ್ಣ, ಅಕ್ಕ ಮಹಾದೇವಿ ಮತ್ತು ಅಲ್ಲಮ ಪ್ರಭುಗಳ ಕಾವ್ಯವನ್ನು ನಿಮ್ಮ ಮುಂದೆ ಹಾಡಲಿದೆ. ಶಿವಭಕ್ತಿ ಮತ್ತು ಜೀವನಾನುಭವದ ಸಡಗರ ಒಟ್ಟೊಟ್ಟಿಗೆ.ಸ್ಥಳ: ಶ್ರೀ ನಾಗಲಿಂಗೇಶ್ವರ ದೇವಸ್ಥಾನ (ಬಿಗ್ ಬಜಾರ್ ಎದುರು), 25ನೆ ಮೇನ್, 9ನೆ ಬ್ಲಾಕ್, ಜಯನಗರ. ಸಂಜೆ 7.30ಕ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry