ಭಾನುವಾರ, ಡಿಸೆಂಬರ್ 8, 2019
21 °C

ಅಹೋರಾತ್ರಿ ಸಂಗೀತ

Published:
Updated:
ಅಹೋರಾತ್ರಿ ಸಂಗೀತ

ಗುರುರಾವ್ ದೇಶಪಾಂಡೆ ಸಂಗೀತ ಸಭಾ: ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರಿಗೆ ಗುರು ಗಂಧರ್ವ ಪ್ರಶಸ್ತಿ ಪ್ರದಾನ ಮತ್ತು ಅಹೋರಾತ್ರಿ ಸಂಗೀತ.

ಗುರುರಾವ್ ದೇಶಪಾಂಡೆ ಸಂಗೀತ ಸಭಾ ಟ್ರಸ್ಟ್ ಕಳೆದ 29 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.

ಸಂಗೀತದ ಮೇರು ಪ್ರತಿಭೆ ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ನಡೆಯುತ್ತದೆ. ಈ ಉತ್ಸವದಲ್ಲಿ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರು ಕಾರ್ಯಕ್ರಮ ನೀಡಿ ಸಾವಿರಾರು ಮಂದಿ ಸಂಗೀತ ಪ್ರಿಯರನ್ನು ಮುದಗೊಳಿಸಿದ್ದಾರೆ.

ಶನಿವಾರ ಅಹೋರಾತ್ರಿ ಸಂಗೀತ ಕಾರ್ಯುಕ್ರಮ. ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರಿಂದ ಬಾನ್ಸುರಿ, ವಿದುಷಿ ಕಸ್ತೂರಿ ಅಟ್ರಾವಾಲ್ಕರ್, ಶ್ರುತಿ ಸಡೋಲ್ಕರ್, ಪಂಡಿತ್ ರಾಮದೇಶಪಾಂಡೆ, ವಿನಾಯಕ ತೊರವಿ ಹಾಗೂ ರಮಣಿ ಅವರಿಂದ ಗಾಯನ ಇರುತ್ತದೆ.

ಸ್ಥಳ: ಜಿಮ್‌ಖಾನ ಇಂಡೋರ್ ಸ್ಟೇಡಿಯಂ, ಐಐಎಸ್‌ಸಿ, ಯಶವಂತಪುರ. ರಾತ್ರಿ 9.

ಪ್ರತಿಕ್ರಿಯಿಸಿ (+)