ಅ. 23 ರಂದು ಕೇರಳಕ್ಕೆ ಡಿಯಾಗೊ ಮರಡೋನಾ

6

ಅ. 23 ರಂದು ಕೇರಳಕ್ಕೆ ಡಿಯಾಗೊ ಮರಡೋನಾ

Published:
Updated:

ತಿರುವನಂತಪುರ (ಪಿಟಿಐ): ಕೇರಳದ ಕ್ರೀಡಾ ಪ್ರೇಮಿಗಳಿಗೆ ಫುಟ್‌ಬಾಲ್ ದಂತಕತೆ ಡಿಯಾಗೊ ಮರಡೋನಾ ಅವರನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಲಭಿಸಿದೆ. ಅರ್ಜೆಂಟೀನಾದ ಮಾಜಿ ಆಟಗಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ 23 ರಂದು ಕೇರಳಕ್ಕೆ ಆಗಮಿಸಲಿದ್ದಾರೆ.ಕಣ್ಣೂರಿನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬಾಬಿ ಚೆಮ್ಮನೂರ್ ಇಂಟರ್‌ನ್ಯಾಷನಲ್ ಜ್ಯುವೆಲ್ಲರ್ಸ್‌   ಮತ್ತು ಏರ್‌ಲೈನ್ಸ್‌ನ್ನು ಅವರು ಅಕ್ಟೋಬರ್ 24 ರಂದು ಉದ್ಘಾಟಿಸಲಿದ್ದಾರೆ. ಅ. 23 ರಂದು ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಮರಡೋನಾ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಕಣ್ಣೂರಿಗೆ ತೆರಳುವರು.ಕಣ್ಣೂರಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಮುಂದೆ ಕೆಲಹೊತ್ತು ತಮ್ಮ `ಕಾಲ್ಚಳಕ~ ತೋರುವರು ಎಂದು ಸಂಘಟಕರು ತಿಳಿಸಿದ್ದಾರೆ. ಕೇರಳದ ಕಣ್ಣೂರು, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮರಡೋನಾ ಅವರ ಅಪಾರ ಅಭಿಮಾನಿಗಳಿದ್ದಾರೆ. ಮರಡೋನಾ 2008 ರಲ್ಲಿ ಕೋಲ್ಕತ್ತಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry