ಅ.13ರಿಂದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್

ಭಾನುವಾರ, ಮೇ 26, 2019
30 °C

ಅ.13ರಿಂದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್

Published:
Updated:

ಉಡುಪಿ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಪ್ರಾಯೋಜಿತ 28ನೇ  ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆಯಲಿವೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ರಘುಪತಿ ಭಟ್, ಈ ಕೂಟದಲ್ಲಿ  ರಾಜ್ಯದ 30 ಜ್ಲ್ಲಿಲೆಗಳ, ಡಿವೈಎಸ್‌ಎಸ್, ಭಾರತ ಕ್ರೀಡಾ ಪ್ರಾಧಿಕಾರ ತಂಡದ ಸುಮಾರು ಎರಡು ಸಾವಿರ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಪ್ ಬ್ಯಾಂಕ್ ಕ್ರೀಡಾಕೂಟಕ್ಕೆ ರೂ.10 ಲಕ್ಷ ನೆರವು ನೀಡಿದೆ ಎಂದರು.ಮೂರು ದಿಗಳ ಈ ಕ್ರೀಡಾಕೂಟದಲ್ಲಿ 240 ಸ್ಪರ್ಧೆಗಳು ನಡೆಯಲಿವೆ. ಪ್ರವೇಶ ಪತ್ರಗಳು ಹಾಗೂ ಸ್ಪರ್ಧೆಗಳ ಬಗ್ಗೆ ಮಾಹಿತಿಯನ್ನು ರಾಜ್ಯ ಅಥ್ಲೆಟಿಕ್ ಸ್ಪರ್ಧೆಯು ಈಗಾಗಲೇ ಎಲ್ಲ ಜಿಲ್ಲಾ ಸಂಸ್ಥೆಗಳಿಗೆ ರವಾನಿಸಿದೆ. ಅ.13ರಂದು ಸಂಜೆ ಉದ್ಘಾಟನೆಯೊಂದಿಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಈ ಕ್ರೀಡಾಕೂಟದಲ್ಲಿ ಮಾಜಿ ಅಂತರರಾಷ್ಟ್ರೀಯ ಓಟಗಾರ್ತಿ ಅಶ್ವಿನಿ ನಾಚಪ್ಪ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟಕ್ಕೆ ಪೂರ್ವ ತಯಾರಿಯಾಗಿ ಕ್ರೀಡಾಂಗಣದ ಸಿದ್ಧತಾ ಕಾರ್ಯ ನಡೆದಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry