ಶುಕ್ರವಾರ, ಮೇ 20, 2022
27 °C

ಅ.17 ರಂದು ತಲಕಾವೇರಿ ತೀರ್ಥೋದ್ಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇದೇ ತಿಂಗಳ 17ರ ಮಧ್ಯ ರಾತ್ರಿ ನಡೆಯಲಿರುವ ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ದೇವಾ ಲಯದ ಆವರಣದೊಳಗೆ ಭಕ್ತಾದಿ ಗಳಿಗೆ ಅನ್ನದಾನ ಮಾಡುವ ಕಾರ್ಯ ವನ್ನು ದೇವಾಲಯದ ಸಮಿತಿಗೆ ವಹಿಸಿ ಕೊಡಲಾಗಿದೆ.ನಗರದ ಕೋಟೆ ವಿಧಾನಸಭಾಂಗಣ ದಲ್ಲಿ ಸೋಮವಾರ ನಡೆದ ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ತಲಕಾವೇರಿಯಲ್ಲಿ ತೀಥೋದ್ಭವ ದಿನದಂದು ಭಕ್ತಾದಿಗಳಿಗೆ ಅನ್ನದಾನ ಮಾಡಲು ದೇವಾಲಯ ಸಮಿತಿಗೆ ವಹಿಸಿಕೊಡಲಾಗಿದೆ. ಅನ್ನದಾನ ಮಾಡಲು ಮುಂದೆ ಬಂದಿರುವ  ಸಂಘ ಸಂಸ್ಥೆಗಳಿಗೆ ಭಾಗಮಂಡಲದಲ್ಲಿ ಅನ್ನ ಸಂತರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ.ಕೊಡಗು ಏಕೀಕರಣ ರಂಗ, ಕೊಡವ ಸಮಾಜ, ಮಂಡ್ಯದ ತಂಡ ಸೇರಿದಂತೆ ಅನ್ನ ಸಂತರ್ಪಣೆ ಬಯಸುವ ಸಂಘ ಸಂಸ್ಥೆಗಳಿಗೆ ಚೆಟ್ಟಿಯಾರ್ ಮಠದ ಅವರಣ ಮತ್ತು ಅದರ ಕೆಳಭಾಗದಲ್ಲಿ ಅವಕಾಶ ಕಲ್ಪಿಸಲು ನಿರ್ಣಯ ಕೈಗೊಳ್ಳಲಾಯಿತು.ನಿರಂತರ ವಿದ್ಯುತ್: ತುಲಾ ಸಂಕ್ರ ಮಣ ತೀರ್ಥೋದ್ಭವ ರಾತ್ರಿ ವೇಳೆ ನಡೆ ಯುತ್ತಿರುವುದರಿಂದ ಅ.17 ಮತ್ತು 18 ರಂದು ಯಾವುದೇ ವ್ಯತ್ಯಯವಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡು ವಂತೆ ಸೆಸ್ಕ್‌ನ ಅಧಿಕಾರಿಗಳಿಗೆ ಕೆ.ಜಿ. ಬೋಪಯ್ಯ ಸೂಚಿಸಿದರು.ರಸ್ತೆ ದುರಸ್ತಿಗೆ ಸೂಚನೆ: ಮಡಿಕೇರಿ ತಲಕಾವೇರಿ ರಸ್ತೆ ದುಸ್ಥಿತಿಯಲ್ಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೋಪಯ್ಯ ಅವರು, ನಾಳೆಯಿಂದಲೇ ದುರಸ್ತಿ ಕಾರ್ಯ ಚುರುಕುಗೊಳಿಸು ವಂತೆ ಸೂಚಿಸಿದರು.ತಲಕಾವೇರಿ-ಭಾಗಮಂಡಲ ಮರು ಡಾಂಬರೀಕರಣಕ್ಕೆ ಹಣ ಒದಗಿಸಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳ ದಿರುವುದು ಸರಿಯಲ್ಲ. ಈ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿ ರಾರು ಭಕ್ತಾಧಿಗಳು ಆಗಮಿಸುತ್ತಿ ರುವುದರಿಂದ ಸದಾಕಾಲ ಈ ಮಾರ್ಗ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳ ತಕ್ಕದ್ದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳಿಗೆ ನಿರ್ದೇಶನ ನೀಡಿದರು.ಅಂದು ಸೇರುವ ಸಹಸ್ರಾರು ಭಕ್ತರಿಗೆ ಕುಡಿಯಲು ನೀರು, ತುರ್ತು ಆರೋಗ್ಯ ಸೇವೆ, ಅಂಬುಲೆನ್ಸ್ ಸೇವೆಗಳನ್ನು ಸಮ ರ್ಪಕವಾಗಿ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ವರ್ಷದಂತೆ ಈ ವರ್ಷವು ಸಹ ಒಂದೆರಡು ದಿನ ಮುಂಚಿತವಾಗಿಯೇ ತುಲಾ ಸಂಕ್ರಮಣಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ. ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ಸದಸ್ಯರಾದ ರಾಜಾರಾವ್, ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಜಿಲ್ಲಾ ಪೊಲೀಸ್ ವರಿಷ್ಠ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಸಿಇಓ ಎನ್. ಕೃಷ್ಣಪ್ಪ, ಹಿರಿಯ ಉಪ ವಿಭಾಗಾ ಧಿಕಾರಿ ಡಾ.ಎಂ.ಆರ್ ರವಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಇದೇ ವೇಳೆ ಸಭೆಯಲ್ಲಿ ತಲಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಪ್ರಚಾರಕ್ಕಾಗಿ ಸಿದ್ಧಪಡಿಸಲಾಗಿರುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.ಹೆಚ್ಚುವರಿ ಬಸ್ ಸೌಕರ್ಯ:  ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪ ಕರಾದ ಲಚ್ಮೆಗೌಡ ಅವರು ಮಾತ ನಾಡಿ,  ತಲಕಾವೇರಿ- ಭಾಗಮಂಡಲ ನಡುವೆ 10 ಡಬಲ್ ಡೋರ್ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಮಂಗಳೂರು ವಿಭಾಗಕ್ಕೆ ಮನವಿ ಸಲ್ಲಿಸಲಾಗಿದೆ. ಭಾಗಮಂಡಲ-ಮಡಿಕೇರಿ ನಡುವೆ ಓಡಾಟಕ್ಕೆ 20 ಬಸ್ ಗಳನ್ನು ಒದಗಿಸಲಾಗುವುದು. ಹೆಚ್ಚುವರಿ ಬಸ್ ಬೇಕೆನಿಸಿದಲ್ಲಿ ಅದನ್ನು ಪೂರೈಸುವುದಾಗಿ ಸಭೆಗೆ ಮಾಹಿತಿ ನೀಡಿದರು.ಅ.12ರಂದು ವಿಶೇಷ ಸಭೆ

ತೀರ್ಥೋದ್ಭವ ದಿನದಂದು ಕೈಗೊಳ್ಳಬೇಕಾದ ಸಿದ್ಧತೆಗಳ ಚರ್ಚಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಅ.12ರಂದು ಭಾಗಮಂಡಲದಲ್ಲಿ ಕರೆಯಬೇಕೆಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಜಿಲ್ಲಾಡಳಿತಕ್ಕೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.