ಅ.19ರಿಂದ ಶ್ರೀರಂಗಪಟ್ಟಣ ದಸರಾ

7

ಅ.19ರಿಂದ ಶ್ರೀರಂಗಪಟ್ಟಣ ದಸರಾ

Published:
Updated:

ಶ್ರೀರಂಗಪಟ್ಟಣ: ಈ ಬಾರಿಯ ಶ್ರೀರಂಗಪಟ್ಟಣ ದಸರಾ ಉತ್ಸವ ಅ.19ರಿಂದ 3 ದಿನಗಳ ಕಾಲ ನಡೆಯಲಿದೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಲತಾ ತಿಳಿಸಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸೆ.19ರಂದು ಮಧ್ಯಾಹ್ನ 2 ಗಂಟೆಗೆ ಕಿರಂಗೂರು ಸರ್ಕಲ್ ಬಳಿಯ ಬನ್ನಿ ಮಂಟಪದಲ್ಲಿ ದಸರಾ ಉತ್ಸಕ್ಕೆ ಚಾಲನೆ ನೀಡಲಾಗುವುದು. ರಂಗನಟಿ ಬಿ.ಜಯಶ್ರೀ ಅಥವಾ ಪ್ರೊ.ಜಿ.ವೆಂಕಟಸುಬ್ಬಯ್ಯ ಈ ಇಬ್ಬರಲ್ಲಿ ಒಬ್ಬರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುವುದು ಎಂದರು.ಬನ್ನಿಮಂಟಪದಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ ಜಂಬೂ ಸವಾರಿ ನಡೆಯಲಿದೆ. ಜತೆಯಲ್ಲಿ ಅಶ್ವದಳ, ಪೊಲೀಸ್ ದಳ, ಎನ್‌ಸಿಸಿ, ಜಾನಪದ ಕಲಾ ತಂಡಗಳು ಸಾಗಲಿವೆ. ಸಂಜೆ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಬಾಣ, ಬಿರಸುಗಳ ಪ್ರದರ್ಶನ ನಡೆಯಲಿದೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ರೂಪಿಸಲಾಗುವುದು ಎಂದು ಹೇಳಿದರು.ಸೆ.20 ರಂದು ನಾಡ ಕುಸ್ತಿ, ರಸ್ತೆ ಓಟ, ರಂಗೋಲಿ ಹಾಗೂ ಮಹಿಳಾ ಸಂಭ್ರಮ ಜರುಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕವಿಗೋಷ್ಠಿ, ಜಾನಪದ ನೃತ್ಯ ಇತರ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗುತ್ತದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.ಸಾಹಿತಿ ಪ್ರೊ.ಕರಿಮುದ್ದೀನ್, ಡಾ.ಭಾನುಪ್ರಕಾಶ್ ಶರ್ಮಾ, ತಹಶೀಲ್ದಾರ್ ಅರುಳ್‌ಕುಮಾರ್, ತಾ.ಪಂ. ಅಧ್ಯಕ್ಷೆ ನಿರ್ಮಿತಾ ಲೋಕೇಶ್,ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಎಂ.ಸಂತೋಷ್, ಜಿ.ಉಮಾಶಂಕರ್, ಬಿಇಓ ಕೆ.ಜಗದೀಶ್, ಡಿವೈಎಸ್ಪಿ ಕಲಾ ಕೃಷ್ಣಸ್ವಾಮಿ, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ಚುಸಾಪ ಅಧ್ಯಕ್ಷ ಕೊಡಗಹಳ್ಳಿ ಪುರುಷೋತ್ತಮ, ಕರವೇ ಮುಖಂಡ ಸ್ವಾಮಿಗೌಡ, ಕೆ.ಬಿ.ಬಸವರಾಜು, ಚಂದಗಾಲು ಶಂಕರ್, ಕೆ.ಶೆಟ್ಟಹಳ್ಳಿ ಸುರೇಶ್ ಸಭೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry