ಅ.26ರಿಂದ ರಾಜ್ ಕಪ್ ಕ್ರಿಕೆಟ್ ಟೂರ್ನಿಯ ಝಲಕ್

7

ಅ.26ರಿಂದ ರಾಜ್ ಕಪ್ ಕ್ರಿಕೆಟ್ ಟೂರ್ನಿಯ ಝಲಕ್

Published:
Updated:

ಬಾಗಲಕೋಟೆ: ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘ ಹಮ್ಮಿಕೊಂಡಿರುವ ಚಲನಚಿತ್ರ ತಾರೆಯರ ಮತ್ತು ಶಾಸಕರ ಕ್ರಿಕೆಟ್ ಟೂರ್ನಿ ಇದೇ 26ರಿಂದ ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿ ನಡೆಯಲಿದ್ದು 27ರ ಪಂದ್ಯಗಳಿಗೆ ನಗರ ಆತಿಥ್ಯ ವಹಿಸಲಿದೆ.  26ರಂದು ಹೊಸಪೇಟೆ ಮತ್ತು 28ರಂದು ವಿಜಾಪುರದಲ್ಲಿ ಪಂದ್ಯಗಳು ನಡೆಯಲಿದ್ದು 29ರಂದು ಗುಲ್ಬರ್ಗದಲ್ಲಿ ಫೈನಲ್ ನಿಗದಿಯಾಗಿದೆ. ಟೂರ್ನಿಯ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕೀಡಾಂಗಣದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು ಚಲನಚಿತ್ರ ತಾರೆಯರ ಫ್ಲೆಕ್ಸ್‌ಗಳು ಬೀದಿಬೀದಿಗಳಲ್ಲಿ ರಾರಾಜಿಸುತ್ತಿವೆ.ಶಿವರಾಜ್‌ಕುಮಾರ್, ಉಪೇಂದ್ರ, ವಿಜಯ, ಗಣೇಶ,  ಶ್ರೀನಗರ ಕಿಟ್ಟಿ, ಪುನೀತ್‌ರಾಜಕುಮಾರ್, ಯಶ್, ಚಲನಚಿತ್ರ ತಾಂತ್ರಿಕ ವರ್ಗದವರು, ನಿರ್ಮಾಪಕರು, ನಿರ್ದೇಶಕರು, ನೃತ್ಯಗಾರರು, ಹಿನ್ನೆಲೆ ಗಾಯಕರು ಮುಂತಾದವರು ಇಲ್ಲಿಗೆ ಆಗಮಿಸಲಿದ್ದಾರೆ. `ಒಟ್ಟು 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು 40 ಪಂದ್ಯಗಳು ಇರುತ್ತವೆ. ತಲಾ 12 ಓವರ್‌ಗಳ ನಾಲ್ಕು ಪಂದ್ಯಗಳು ಒಂದೊಂದು ಜಿಲ್ಲೆಯಲ್ಲಿ ನಡೆಯಲಿವೆ. ಸಾರ್ವಜನಿಕರಿಗೆ ರೂ.100 ಮತ್ತು ವಿಐಪಿಗಳಿಗೆ ರೂ.1000 ಟಿಕೆಟ್ ದರ ನಿಗದಿಪಡಿಸಲಾಗಿದೆ~ ಎಂದು ಸಂಘಟಕ ಆರ್.ಡಿ. ಬಾಬು `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry