ಅ.5ರಿಂದ ದಸರಾ ಕುಸ್ತಿ

7

ಅ.5ರಿಂದ ದಸರಾ ಕುಸ್ತಿ

Published:
Updated:

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್‌ 5ರಿಂದ 11ರವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಟೂರ್ನಿಯನ್ನು ಆಯೋಜಿಸಲಾಗಿದೆ. ದೊಡ್ಡಕೆರೆ ಮೈದಾನದ ಡಿ. ದೇವರಾಜ ಅರಸ್‌ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ವಿವಿಧ ವಿಭಾಗಗಳ ಟೂರ್ನಿಗಳು ನಡೆಯಲಿವೆ.32ನೇ ರಾಜ್ಯಮಟ್ಟದ ಪುರುಷರ, 6ನೇ ರಾಜ್ಯಮಟ್ಟದ ಮಹಿಳೆಯರ ಮತ್ತು 8ನೇ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ  ಕುಸ್ತಿ ಪಂದ್ಯಗಳು ನಡೆಯಲಿವೆ. ಅಕ್ಟೋಬರ್‌ 5 ರಿಂದ 11ರವರೆಗೆ  ಪ್ರತಿದಿನವೂ ಸಂಜೆ 7 ರಿಂದ 8.-30ರವರೆಗೆ  ನಾಡಕುಸಿ್ತ ನಡೆಯಲಿದೆ. 8ರಿಂದ 11ರವರೆಗೆ ಅಖಿಲ ಭಾರತ ಆಹಾ್ವನಿತ ಪುರುಷ ಮತ್ತು ಮಹಿಳೆಯರ ಮತ್ತು ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಪಂದ್ಯಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry