ಶುಕ್ರವಾರ, ಏಪ್ರಿಲ್ 16, 2021
20 °C

ಆಂಗ್ಲ ಭಾಷೆಯ ವ್ಯಾಮೋಹ ಆತಂಕಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಕನ್ನಡ ನಾಡನ್ನು ಆಂಗ್ಲಭಾಷೆಯ ವ್ಯಾಮೋಹದಿಂದ ಆಂಗ್ಲಮಯವನ್ನಾಗಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.  ತಾಲ್ಲೂಕಿನ ಜನ್ನಾಪುರದ ವರ್ತಕರ ಭವನದಲ್ಲಿ ಶನಿವಾರ ನಡೆದ ಗೋಣಿಬೀಡು ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸೇವಾದೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತಿ ಕುಂದೂರು ಅಶೋಕ್ ಉಪನ್ಯಾಸ ನೀಡಿ, ಎಲ್ಲಿ ಅಜ್ಞಾನವಿದೆಯೋ ಅಲ್ಲಿ ಜ್ಞಾನದ ಬೆಳಕಿನ ಕಿರಣ ಮೂಡಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ ಮಾತನಾಡಿ, 6ನೇ ತರಗತಿಯವರೆಗೆ ಕನ್ನಡ ಮಾದ್ಯಮವೇ ಕಡ್ಡಾಯವಾಗಬೇಕು. ಎಲ್ಲಾ ರಂಗಗಳಲ್ಲೂ ಕನ್ನಡದ ಬಳಕೆಯಾಗಬೇಕು  ಎಂದರು.ಕಸಾಪ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಅಶೋಕ್ ಮಾತನಾಡಿ, ನಾಡಿನ ಸಮಸ್ತ ಜನತೆಯನ್ನು ಒಗ್ಗೂಡಿಸುವ ಶಕ್ತಿ ಕನ್ನಡ ಭಾಷೆಗಿದೆ  ಎಂದರು.ಕಾರ್ಯಕ್ರಮದಲ್ಲಿ ಗೋಣಿಬೀಡು ಹೋಬಳಿಯ ಕಸಾಪದ ನೂತನ ಅಧ್ಯಕ್ಷ ಎಂ.ಸಿ. ಆದರ್ಶ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಹಳೆಕೆರೆ ರಘು ಕನ್ನಡ ಧ್ವಜ ಹಸ್ತಾಂತರಿಸಿದರು. ನಂತರ ಎಂ.ಎಸ್. ಅಶೋಕ್ ಪ್ರತಿಜ್ಞಾ ವಿಧಿ ಬೋದಿಸಿದರು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಗ್ಗಲಮಕ್ಕಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಜೆ.ಎಸ್. ಸುಧೀರ್, ಹೊರಟ್ಟಿ ರಘು, ಗಣಪತಿ ಆಚಾರ್, ಮೋಹನ್ ರಾಜಣ್ಣ, ಭಾನುಮತಿ, ಪ್ರಿಯಾಂಕ, ತಾ.ಪಂ. ಉಪಾಧ್ಯಕ್ಷೆ ಸುಮಾಸುರೇಶ್, ನೇಪಾ ಆದಿತ್ಯ ಮುಂತಾದವರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.