ಶನಿವಾರ, ಮೇ 8, 2021
25 °C

ಆಂಗ್ಲ ಮಾಧ್ಯಮ ಅವಶ್ಯಕ: ನಾಣಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಕನ್ನಡ ಭಾಷೆಯನ್ನು ಬಲವಂತದಿಂದ ಕಲಿಸುವುದು ಅಸಾಧ್ಯ. ಕನ್ನಡವನ್ನು ಅಭಿಮಾನದಿಂದ ಕಲಿಯುವ ವಾತಾವರಣ ನಿರ್ಮಿಸಿ ಎಂದು ಎಂದು ವಿಧಾನಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಕರೆ ನೀಡಿದರು.

 

ಸಮೀಪದ ಬೆಟ್ಟಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಮಾತನಾಡಿದರು. `ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳು ದ್ವಿತೀಯ ದರ್ಜೆಯ ಮಕ್ಕಳಾಗಬಾರದು. ಎ್ಲ್ಲಲ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮವನ್ನು ತೆರೆಯುವುದು ಅವಶ್ಯ~ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ, `ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಶೈಕ್ಷಣಿಕ ಅಭಿವೃದ್ಧಿಯಾಗಬೇಕು~ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಾಲೆಯ ಸ್ಥಾಪಕರಾದ ಪಟ್ಟಡ ಬಿದ್ದಪ್ಪನವರ ಮೊಮ್ಮಗ ಪಟ್ಟಡ ಶಿವರಾಂ, ಸ್ಥಳದಾನಿ ಚೆರಿಯಂಡ ಉತ್ತಯ್ಯ, ಕಟ್ಟಡ ದಾನಿ ದಿವಂಗತ ಅಯ್ಯುಡ ಈರಪ್ಪನವರ ಮಗ ಮನು, ಕಟ್ಟಡ ನಿರ್ಮಾಣದ ಮುಂದಾಳತ್ವ ವಹಿಸಿದ ದಿ. ಮುಕ್ಕಾಟಿರ ಸೋಮಯ್ಯನವರ ಮಗ ಮುಕ್ಕಾಟಿರ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು.ಸ್ವಾಗತ ಸಮಿತಿ ಅಧ್ಯಕ್ಷ ನಾಪಂಡ ರ‌್ಯಾಲಿ ಮಾದಯ್ಯ ಸ್ವಾಗತಿಸಿದರು. ಶತಮಾನೋತ್ಸವ ನೆನಪಿಗಾಗಿ `ಶತಸಂಭ್ರಮ ಸ್ಮರಣ ಸಂಚಿಕೆ~ಯನ್ನು ಬಿಡುಗಡೆ ಮಾಡಲಾಯಿತು.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅಲ್ಲಾರಂಡ ಬೀನಾ ಬೊಳ್ಳಮ್ಮ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಹೊಸಮನೆ ಕವಿತಾ ಪ್ರಭಾಕರ್, ತಳೂರು ಕೆ.ಕಾಳಪ್ಪ, ಬೆಟ್ಟಗೇರಿ ಮುಸ್ಲಿಂ ಜಮಾಯತ್ ಅಧ್ಯಕ್ಷ ಬಿ.ಎ.ಅಬ್ದುಲ್ಲ, ಅಬ್ದುಲ್ ಹಮೀದ್, ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ.ರಮೇಶ್, ಮುಖ್ಯ ಶಿಕ್ಷಕಿ ಬಿ.ದೇವಕ್ಕಿ, ಪಟ್ಟಡ ಪ್ರಭಾಕರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.