ಆಂಗ್ಲ ಮಾಧ್ಯಮ: ಸಾಹಿತಿಗಳ ವಾದ ಅರ್ಥಹೀನ

ಶನಿವಾರ, ಜೂಲೈ 20, 2019
22 °C

ಆಂಗ್ಲ ಮಾಧ್ಯಮ: ಸಾಹಿತಿಗಳ ವಾದ ಅರ್ಥಹೀನ

Published:
Updated:

ಕೃಷ್ಣರಾಜಪೇಟೆ : ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಆಂಗ್ಲ ಶಾಲೆಗಳಿಗೆ ಸೇರಿಸಿರುವ ಸಾಹಿತಿಗಳು, ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಆಂಗ್ಲ ಮಾಧ್ಯಮ ಆರಂಭಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿ ರುವುದು ಅರ್ಥಹೀನ ಎಂದು ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟರು.ಪಟ್ಟಣದ ಎಸ್.ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಮನುಷ್ಯ ತನ್ನ ಹೆತ್ತ ತಾಯಿಯನ್ನು ಮರೆಯಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಯಾವುದೇ ಮಗುವು ತನ್ನ ಮಾತೃಭಾಷೆಯನ್ನು ಮರೆಯುವುದಿಲ್ಲ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆಯ ಕಲಿಕೆಯಿಂದ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಅವಕಾಶಗಳು ದೊರೆ ಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದ ಗ್ರಾಮೀಣ ಮಕ್ಕಳ ಪಾಲಿಗೆ ವರದಾನದಂತಿರುವ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂ ಭಿಸುವುದನ್ನು ಸಾಹಿತಿಗಳು ವಿರೋಧಿ ಸುತ್ತಿರುವುದು ತರವಲ್ಲ ಎಂದು ಪ್ರತಿಪಾದಿಸಿದ ಅವರು, ವೇದಿಕೆಯ ಲ್ಲಿರುವ ಸಾಹಿತ್ಯ ವಲಯದ ಗಣ್ಯರು ಸಹ ಸರ್ಕಾರದ ಕ್ರಮವನ್ನು ಬೆಂಬಲಿ ಸಬೇಕು ಎಂದು ಆಗ್ರಹಿಸಿದರು.ಮಕ್ಕಳ ಸಾಹಿತ್ಯ ವೇದಿಕೆಯ ಚಿಣ್ಣರ ನುಡಿ ತ್ರೈಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ತಾಲ್ಲೂಕು ದಂಡಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ತಾಲ್ಲೂಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲು ಕನ್ನಡ ಭವನದ ಅಗತ್ಯ ವಿದೆ. ತಾಲ್ಲೂಕು ಕಸಾಪ ತನ್ನ ಸ್ವಂತ ಕಟ್ಟಡಕ್ಕೆ ಪುರಸಭೆಯಿಂದ ನಿವೇಶನ ಪಡೆದರೆ, ಕನ್ನಡ ಭವನ ನಿರ್ಮಿಸುವ ನಿಟ್ಟಿನಲ್ಲಿ ಸಂಪನ್ಮೂಲ ಸಂಗ್ರಹಣೆ ಸೇರಿದಂತೆ ಎಲ್ಲ ಬಗೆಯ ಸಹಕಾರ ನೀಡುವುದಾಗಿ ಹಾಗೂ ತಮ್ಮ ಒಂದು ತಿಂಗಳ ಸಂಬಳವನ್ನೇ ದೇಣಿಗೆ ನೀಡು ವುದಾಗಿ  ಭರವಸೆ ನೀಡಿದರು.ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ ನೂತನ ಕಾರ್ಯಕಾರಿ ಸಮಿತಿಯ ಕಾರ್ಯ ಚಟುವಟಿಕೆ ಗಳನ್ನು ಉದ್ಘಾಟಿಸಿದರು. ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಪ್ರೇಮ ಕುಮಾರಿ ರಂಗಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಸಿ.ಪುಟ್ಟ ಸ್ವಾಮಿ, ಪಿ.ಲೋಕೇಶ್, ಉಪಾಧ್ಯಕ್ಷ ವಿಠಲಾಪುರ ಜಯರಾಂ, ಮಾಜಿ ಅಧ್ಯಕ್ಷ ಧರಣೇಂದ್ರಯ್ಯ, ಮಾಜಿ ಉಪಾಧ್ಯಕ್ಷ ಕೆ.ಆರ್.ನೀಲಕಂಠ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ರಾದ ಕೆ.ಜಿ.ವಾಸು ದೇವಮೂರ್ತಿ, ಮಂಗಲ  ಕೆ.ಕಾಳೇಗೌಡ, ಕೆ.ಎಸ್.ಸೋಮಶೇಖರ್, ಸಾಹಿತಿಗಳಾದ ಡಾ.ರಂಗಪ್ಪ, ಡಾ.ಟಿ.ನರಸಿಂಹರಾಜು, ಕೆ.ಜಿ.ನಾಗರಾಜು  ಭಾಗವಹಿಸಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷ ಅ.ಮ.ಶ್ಯಾಮೇಶ್ ಸ್ವಾಗತಿಸಿ, ಕಾರ್ಯ ದರ್ಶಿಗಳಾದ ಮಾರೇನಹಳ್ಳಿ ಲೋಕೇಶ್ ಮತ್ತು ಕೆ.ಮಹೇಶ್ ನಿರೂಪಿಸಿ, ಕೋಶಾಧ್ಯಕ್ಷ ಮರಿಸ್ವಾಮಿ ಗೌಡ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry