ಶನಿವಾರ, ಡಿಸೆಂಬರ್ 7, 2019
25 °C

ಆಂಜನೇಯನಿಗೆ ವಿಶೇಷ ಅಲಂಕಾರ

Published:
Updated:
ಆಂಜನೇಯನಿಗೆ ವಿಶೇಷ ಅಲಂಕಾರ

ನಂದನವನ ಬಡಾವಣೆಯಲ್ಲಿರುವ ಆಂಜನೇಯ ಹಾಗೂ ರಾಘವೇಂದ್ರ ಸ್ವಾಮಿ ದೇಗುಲದಲ್ಲಿ ಹನುಮಜ್ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ನಿರ್ಮಾಣ್ ದೇವಾಲಯಗಳ ಆಡಳಿತ ಮಂಡಳಿ ಅಧೀನದಲ್ಲಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಇಹಪರದಲ್ಲಿ ಇಷ್ಟಾರ್ಥಗಳನ್ನು ಸಿದ್ಧಿಸುವ ವಾಯುಸ್ತುತಿ ಪುನರುಚ್ಚಾರ ಹೋಮವನ್ನು ಹತ್ತಾರು ಋತ್ವಿಜರೊಗೂಡಿ ಆಯೋಜಿಸಲಾಗಿದ್ದ ಮಹೋತ್ಸವದಲ್ಲಿ ನೂರಾರು ಎಳನೀರಿನಿಂದ ರಾಮಸಹಿತ ಹನುಮನಿಗೆ ಅಭಿಷೇಕ ಮಾಡಿ ಅಲಂಕರಿಸಲಾಗಿತ್ತು. ನೂರಾರು ಭಕ್ತರು ಹನಮನಿಗೆ ವಿಶೇಷ ಪೂಜೆ ಸಲ್ಲಿಸಿ ರಾಮನ ಭಂಟನ ಕೃಪೆಗೆ ಪಾತ್ರರಾದರು.

ಪ್ರತಿಕ್ರಿಯಿಸಿ (+)