ಬುಧವಾರ, ನವೆಂಬರ್ 13, 2019
22 °C

ಆಂಜನೇಯಸ್ವಾಮಿ ದಿವ್ಯ ರಥೋತ್ಸವ

Published:
Updated:

ಬಾಣಾವರ: ಸಮೀಪದ ತೊಂಡಿಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಆಂಜನೇಯಸ್ವಾಮಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು

 

ಸಂಪ್ರದಾಯದಂತೆ ರಥೋತ್ಸವ ಕಾರ್ಯಗಳು ಶುಕ್ರವಾರದಿಂದಲೇ ಆರಂಭವಾಗಿದ್ದವು. ನಿತ್ಯ ಸಂಪ್ರದಾಯದಂತೆ ಮೂಲವಿಗ್ರಹಕ್ಕೆ ಅಭಿಷೇಕ ಹಾಗೂ ರಾಮನವಮಿ ಪೂಜೆಗಳು, ಕುಂಕುಮ ಅಭಿಷೇಕ, ಮದುವಣಿಗೆ ಶಾಸ್ತ್ರ, ಸೀತಾಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಅಮೃತಸೇವೆ, ಗರುಡೋತ್ಸವ, ಪಲ್ಲಕಿ ಉತ್ಸವದ ಪೂಜೆಗಳನ್ನು ನೆರವೇರಿದವು.

ಮಂಗಳವಾರ ಬೆಳಿಗ್ಗೆ ವಸಂತ ಸೇವೆ, ನಡೆಸಿ ಆಂಜನೇಯ ಸ್ವಾಮಿಯನ್ನು ವಿಶೇಷ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಅಪಾರ ಭಕ್ತರ ಸಮ್ಮುಖದಲ್ಲಿ ಮಹಾದಿವ್ಯ ರಥೋತ್ಸವ ಜರುಗಿತು. ರಥಕ್ಕೆ ಭಕ್ತರು ಬಾಳೆಹಣ್ಣು, ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತು. ರಥೋತ್ಸವಕ್ಕೆ ವೀರಗಾಸೆ ಮತ್ತು ಶಿವನ ಕುಣಿತ ಹಾಗೂ ಪಾನಕದ ಗಾಡಿಗಳು ವಿಶೇಷ ಕಳೆಯನ್ನು ತಂದಿದ್ದವು. ತೊಂಡಿಗನಹಳ್ಳಿ, ಕೆಂಗುರಬರಹಟ್ಟಿ, ಕೋಡಿಹಳ್ಳಿ, ಹನುಮನಹಳ್ಳಿ ಗ್ರಾಮಸ್ಥರು ಒಟ್ಟಾಗಿ ರಥೋತ್ಸವ ನೆರವೇರಿಸಿದರು.

ಪ್ರತಿಕ್ರಿಯಿಸಿ (+)