ಆಂಜನೇಯಸ್ವಾಮಿ ಪಾಳ್ಯಸೇವೆ

7

ಆಂಜನೇಯಸ್ವಾಮಿ ಪಾಳ್ಯಸೇವೆ

Published:
Updated:

ಮದ್ದೂರು: ಪಟ್ಟಣದ ಗಂಗಾಮತಸ್ಥರ ಬೀದಿಯಲ್ಲಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಮೂರ್ತಿಯ ಮೆರವಣಿಗೆ ಹಾಗೂ ಪಾಳ್ಯ ಸೇವೆ ಕಾರ್ಯಕ್ರಮ ಗುರುವಾರ ಸಂಭ್ರಮದಿಂದ ನಡೆಯಿತು.ಶಿಂಷಾ ನದಿಯಿಂದ ಆಂಜನೇಯಸ್ವಾಮಿ ಮೂರ್ತಿಯನ್ನು ಹೊಂಬಾಳೆ ಸಮೇತ ಮೀಸಲು ನೀರು ತರುವುದರೊಂದಿಗೆ ಮೆರವಣಿಗೆ ಮೂಲಕ ಸಂಭ್ರಮದಿಂದ ಕರೆ ತರಲಾಯಿತು. ಶುಕ್ರವಾರ ಮುಂಜಾನೆ 4.11 ಗಂಟೆಗೆ ಆಂಜನೇಯಸ್ವಾಮಿ ಪ್ರಾಣ ಪ್ರತಿಷ್ಠಾಪನೆ, ಅಷ್ಟ ಬಂಧನ, ನೇತ್ರೋನ್ಮಿಲನ, ಮುಖ್ಯ ಪ್ರಾಣ ಹೋಮ, ಪೂರ್ಣಾಹುತಿ, ಅಭಿಷೇಕ, ಅಲಂಕಾರ ಹಾಗೂ ನೈವೇದ್ಯ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.ಬೆ.8ಗಂಟೆಗೆ ಸ್ವಾಮಿ ಅಭಿಷೇಕ ನಡೆಯಲಿದ್ದು, ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಅದೇ ರಾತ್ರಿ 11ಗಂಟೆಗೆ ಪತ್ತಿನ ಮೆರವಣಿಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲು ಗಂಗಾಪರಮೇಶ್ವರಿ ಸಂಘದ ಅಧ್ಯಕ್ಷ ಶಂಕರ್ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry