ಆಂತರಿಕ ಭಯೋತ್ಪಾದನೆ ವಿರುದ್ಧ ಸಂಘಟಿತರಾಗಿ

7

ಆಂತರಿಕ ಭಯೋತ್ಪಾದನೆ ವಿರುದ್ಧ ಸಂಘಟಿತರಾಗಿ

Published:
Updated:

ಗೌರಿಬಿದನೂರು: ದೇಶ ಎದುರಿಸುತ್ತಿರುವ ಆಂತರಿಕ ಭಯೋತ್ಪಾದನೆ ವಿರುದ್ಧ ಯುವಜನತೆ ಸಂಘಟಿತವಾಗಿ ಹತ್ತಿಕ್ಕಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ ಹೇಳಿದರು.

ಮಂಗಳೂರಿನಲ್ಲಿ ನಡೆಯಲಿರುವ ಯುವ ಸಮಾವೇಶಕ್ಕೆ ಹೊರಟ ತಾಲ್ಲೂಕಿನ ಯುವ ಮೋರ್ಚಾ ಪದಾಧಿಕಾರಿಗಳನ್ನುದ್ಧೇಶಿಸಿ ಪಟ್ಟಣದಲ್ಲಿ ಸೋಮವಾರ ಮಾತನಾಡಿದರು.ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಪ್ರತಾಪ್ ಮಾತನಾಡಿ  ಮಂಗಳೂರಿನಲ್ಲಿ ನಡೆಯುವ ಯುವ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಯುವ ಮೋರ್ಚಾ ಕಾರ್ಯಕರ್ತರು ಪಾಲೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.`ಸಮಾವೇಶದಲ್ಲಿ  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರಸಿಂಗ್ ಠಾಗೋರ್, ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಮೊದಲಾದ ಮುಖಂಡರು ಪಾಲ್ಗೊಳ್ಳುವರು.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮುರಳಿ, ತಾಲ್ಲೂಕು ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಕೋಮಲ್ ನಿರ್ದೇಶಕ ಎಸ್.ರಮೇಶ್, ಪದಾಧಿಕಾರಿಗಳಾದ ಹನುಮೇಗೌಡ, ರಮೇಶ್‌ರಾವ್, ವಿಜಯರಾಘವ, ಮುನಿಲಕ್ಷ್ಮಮ್ಮ, ಜಯಲಕ್ಷ್ಮಮ್ಮ, ಮಂಜುಳಾ  ಮೋಹನ್, ನಾರಾಯಣರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry