ಮಂಗಳವಾರ, ನವೆಂಬರ್ 12, 2019
28 °C

ಆಂಧ್ರದ ಎಂಜಿನಿಯರ್‌ಷಿಕಾಗೊದಲ್ಲಿ ಕಣ್ಮರೆ

Published:
Updated:

ಹೈದರಾಬಾದ್: ಅಮೆರಿಕದ ಷಿಕಾಗೊದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆಂಧ್ರಪ್ರದೇಶ ಮೂಲದ ಪೋತರಾಜು ರವಿ ಕುಮಾರ್ (35) ಅಲಿಯಾಸ್ ಪಿ. ವೆಂಕಟ ಶರತ್‌ಕುಮಾರ್ ಭಾನುವಾರದಿಂದ ನಾಪತ್ತೆಯಾಗಿದ್ದಾರೆ.ಗುಂಟೂರು ಮೂಲದವರಾದ ಶರತ್‌ಕುಮಾರ್ ಆರು ವರ್ಷಗಳಿಂದ ಷಿಕಾಗೊದಲ್ಲಿ ಪತ್ನಿಯೊಂದಿಗೆ ನೆಲೆಸಿದ್ದಾರೆ. ಅವರು ಟಿಸಿಎಸ್ ಉದ್ಯೋಗಿ. ತಮ್ಮ ಸಹೋದರ ಸಂಬಂಧಿ ಪಿ. ಶ್ರೀನಿವಾಸು ಕುಟುಂಬದ ಜತೆ ಭಾನುವಾರ ನಯಾಗಾರ ಜಲಪಾತಕ್ಕೆ ವಿಹಾರಕ್ಕೆ ತೆರಳಿದವರು ವಾಪಸು ಬರುವಾಗ ಪ್ರವಾಸಿ ಬಸ್ ಹತ್ತಿರಲಿಲ್ಲ. ವಾಹನ ಕೆಲದೂರ ಪ್ರಯಾಣಿಸಿದ ನಂತರ ಕುಟುಂಬ ಸದಸ್ಯರು ಅದನ್ನು ಗಮನಿಸಿದರು. ವಾಪಸು ಬಂದು ಹುಡುಕಿದರೂ ಶರತ್‌ಕುಮಾರ್ ಪತ್ತೆಯಾಗಿಲ್ಲ. ಈ ಕುರಿತು ಅಮೆರಿಕದಲ್ಲಿ ಪ್ರಕರಣದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)