ಆಂಧ್ರಪ್ರದೇಶ: ಮಾಜಿ ಮುಖ್ಯಕಾರ್ಯದರ್ಶಿ ಸಿಬಿಐ ವಿಚಾರಣೆ

7

ಆಂಧ್ರಪ್ರದೇಶ: ಮಾಜಿ ಮುಖ್ಯಕಾರ್ಯದರ್ಶಿ ಸಿಬಿಐ ವಿಚಾರಣೆ

Published:
Updated:

ಹೈದರಾಬಾದ್, ಆಂಧ್ರಪ್ರದೇಶ (ಐಎಎನ್ಎಸ್):  ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ. ಎಸ್. ಜಗಮೋಹನ್ ರೆಡ್ಡಿ ಅವರ ಮೇಲಿನ ಅಕ್ರಮ ಆಸ್ತಿ ಸಂಪಾದನೆ ಕುರಿತ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಪಿ. ರಮಾಕಾಂತ್ ರೆಡ್ಡಿ ಅವರು ಶುಕ್ರವಾರ ಇಲ್ಲಿ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾದರು.ಹಿರಿಯ ಐಎಎಸ್ ಅಧಿಕಾರಿಯಾದ ರಮಾಕಾಂತ್ ರೆಡ್ಡಿ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್. ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸತತವಾಗಿ ಎರಡನೇ ದಿನ ಸಿಬಿಐ ಅಧಿಕಾರಿಗಳು ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಿದರು.ಪ್ರಸ್ತುತ ರಮಾಕಾಂತ್ ಅವರು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿ.ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ಮಂಜೂರಾದ ಕೈಗಾರಿಕಾ ಮತ್ತು ಮೂಲಸವಲತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry