ಭಾನುವಾರ, ಜನವರಿ 19, 2020
20 °C

ಆಂಧ್ರಪ್ರದೇಶ ವಿಭಜನೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಪಿಟಿಐ): ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವುದನ್ನು ವಿರೋ­ಧಿಸಿ ತೆಲಗು ದೇಶಂ ಪಕ್ಷ (ಟಿಡಿಪಿ), ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮತ್ತು ಇನ್ನಿತರ ಸಂಯುಕ್ತ ಆಂಧ್ರ ಬೆಂಬಲಿಗರು ಬಂದ್‌ಗೆ ಕರೆ ನೀಡಿದ್ದರಿಂದ ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶದಲ್ಲಿ ಜನ­ಜೀವನ ಅಸ್ತವ್ಯಸ್ತ­ಗೊಂಡಿತು.ಅಂಗಡಿ–ಮುಂಗಟ್ಟು, ವಾಣಿಜ್ಯ ಮಳಿ­ಗೆ­­ಗಳು ಮತ್ತು ಶಾಲಾ–ಕಾಲೇಜು­ಗಳನ್ನು ಮುಚ್ಚಲಾಗಿತ್ತು. ದಕ್ಷಿಣ ಆಂಧ್ರ­ಪ್ರದೇಶ­ದಲ್ಲಿ ಸಾರಿಗೆ ಸೇವೆ ಸ್ಥಗಿತ­ಗೊಂಡಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀ­-ಸರು ಬಿಗಿಬಂದೋಬಸ್ತ್‌ ಕಲ್ಪಿಸಿದ್ದು, ಕರಾವಳಿ ಆಂಧ್ರ ಮತ್ತು ರಾಯಲ­ಸೀಮಾ ಪ್ರದೇಶ­ದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೆಚ್ಚು­ವರಿ ಭದ್ರತಾ ಪಡೆಗಳನ್ನು ನಿಯೋಜಿಸಿವೆ.ಕೇಂದ್ರದ ನಿರ್ಧಾರದ ವಿರುದ್ಧ ನಗರದ ಬೆಂಜ್‌ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಟಿಡಿಪಿ ಶಾಸಕ ದೇವಿನೇನಿ ಉಮಾಮಹೇಶ್ವರ ರಾವ್‌ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ವಾಹನಗಳು ಸಂಚರಿಸಬಾರದು ಎಂದು ಉದ್ರಿಕ್ತ ಪ್ರತಿಭಟನಾಕಾರು ಹೆದ್ದಾರಿಗಳ ಮೇಲೆ ಅಡೆತಡೆಗಳನ್ನು ಸೃಷ್ಟಿಸಿದ್ದರಿಂದ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸ ಲಾಗಿದೆ ಎಂದು ವಿಜಯವಾಡದ ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)