ಗುರುವಾರ , ಜೂನ್ 24, 2021
28 °C

ಆಂಧ್ರಪ್ರದೇಶ ವಿಭಜನೆ: ಹೊಸ ರಾಜಧಾನಿ ಆಯ್ಕೆಗೆ ತಜ್ಞರ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ವಿಭಜಿತ ಆಂಧ್ರಪ್ರದೇಶಕ್ಕೆ  ಹೊಸ ರಾಜಧಾನಿ ಆಯ್ಕೆಗಾಗಿ ಮುಂದಿನ ವಾರ ಐವರು  ಸದಸ್ಯ ರನ್ನೊಳಗೊಂಡ ತಜ್ಞರ ಸಮಿತಿ ರಚಿಸಲಾಗುತ್ತದೆ ಎಂದು ಕೇಂದ್ರ ಸಚಿವ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಆಂಧ್ರ ವಿಭಜನೆಗೆ ಸಂಬಂಧಿಸಿದ ಸಚಿ­ವರ ತಂಡ ಶುಕ್ರವಾರ ಇಲ್ಲಿ ಸಭೆ ಸೇರಿ ಮುಂದಿನ ಕೆಲವು ದಿನಗಳಲ್ಲಿ ತೆಗೆದು­ಕೊಳ್ಳುವ ಕ್ರಮಗಳನ್ನು ಪರಿಶೀಲಿಸಿತು.ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತ­ನಾಡಿದ ಜೈರಾಮ್‌್ ರಮೇಶ್‌, ‘ನೂತನ ರಾಜಧಾನಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿ ಸಲಹೆ ನೀಡುವು­ದಕ್ಕೆ ಈ ಸಮಿತಿಗೆ ಆರು ತಿಂಗಳು ಗಡುವು ನೀಡಲಾಗುತ್ತದೆ’ ಎಂದರು.ಜೂನ್‌ 1ರ ಮಧ್ಯರಾತ್ರಿಯಿಂದಲೇ ತೆಲಂಗಾಣ ರಾಜ್ಯ ಅಧಿಕೃತವಾಗಿ ಉದಯಿಸಲಿದ್ದು, ಅದಕ್ಕೂ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಭಜನೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿವೆ. ಹೈದರಾಬಾದ್‌್ ಸೇರಿ 10 ಜಿಲ್ಲೆಗಳು ತೆಲಂಗಾಣ ವ್ಯಾಪ್ತಿಗೆ ಮತ್ತು 13 ಜಿಲ್ಲೆ­ಗಳು ಆಂಧ್ರಪ್ರದೇಶದ ವ್ಯಾಪ್ತಿಗೆ ಬರು­ತ್ತವೆ. 10 ವರ್ಷಗಳ ವರೆಗೆ ಎರಡೂ ರಾಜ್ಯಗಳಿಗೂ ಹೈದರಾಬಾದ್‌ ರಾಜ­ಧಾನಿ­ಯಾಗಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.