ಆಂಧ್ರಪ್ರದೇಶ: 29 ಶಾಸಕರ ರಾಜಿನಾಮೆ

7

ಆಂಧ್ರಪ್ರದೇಶ: 29 ಶಾಸಕರ ರಾಜಿನಾಮೆ

Published:
Updated:
ಆಂಧ್ರಪ್ರದೇಶ: 29 ಶಾಸಕರ ರಾಜಿನಾಮೆ

ಹೈದರಾಬಾದ್ (ಪಿಟಿಐ): ಆಂಧ್ರದ ದಿವಂಗತ ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿ (ವೈಎಸ್‌ಆರ್) ಅವರ ಹೆಸರನ್ನು ಸಿಬಿಐ ದೂರಿನಲ್ಲಿ ಸೇರಿಸಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್‌ನ 25, ತೆಲುಗು ದೇಶಂ ಪಕ್ಷದ ಇಬ್ಬರು ಬಂಡಾಯ ಶಾಸಕರು ಹಾಗೂ ಇಬ್ಬರು ಸಂಸದರು ರಾಜಿನಾಮೆ ನೀಡಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸಿಬಿಐ ದಾಳಿಗೆ ಒಳಗಾಗಿರುವ ವೈಎಸ್‌ಆರ್ ಪುತ್ರ ಸಂಸದ, ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್‌ಮೋಹನ್ ರೆಡ್ಡಿ ಅವರಿಗೆ ನಿಷ್ಠರಾದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಈ ಶಾಸಕರೆಲ್ಲರೂ ವಿಧಾನಸಭೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಎರಡೂ ರಾಜೀನಾಮೆ ಪತ್ರಗಳನ್ನು ಆಂಧ್ರದ ಪ್ರದೇಶ ಕಾಂಗ್ರೆಸ್ ಸಮೀತಿ ಮುಖ್ಯಕಚೇರಿಗೆ ಫ್ಯಾಕ್ಸ್ ಮೂಲಕ ರವಾನಿಸಿದ್ದಾರೆ.ಶಾಸನಸಭೆಯ ಕಾರ್ಯದರ್ಶಿ ಎಸ್.ರಾಜಾ ಸದರಮ್ ಅವರಿಗೆ ಮಂಗಳವಾರ ರಾಜಿನಾಮೆ ಪತ್ರ ಸಲ್ಲಿಸಿದ ಈ ಶಾಸಕರೆಲ್ಲರೂ ಕಳೆದ ಕೆಲ ತಿಂಗಳುಗಳಿಂದ ಕಡಪಾ ಕ್ಷೇತ್ರದ ಸಂಸದರೂ ಆಗಿರುವ ಜಗನ್ ಅವರ ಜತೆಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry