ಆಂಧ್ರ ಪ್ರದೇಶ: 11 ಶಾಸಕರ ಅಮಾನತು

7

ಆಂಧ್ರ ಪ್ರದೇಶ: 11 ಶಾಸಕರ ಅಮಾನತು

Published:
Updated:

 ಹೈದರಾಬಾದ್, (ಪಿಟಿಐ): ಆಂಧ್ರಪ್ರದೇಶದ ಹಣಕಾಸು ಸಚಿವ ಎ. ರಾಮನಾರಾಯಣ ರೆಡ್ಡಿ ಅವರು ಬಜೆಟ್  ಮಂಡಿಸುವಾಗ ಅದಕ್ಕೆ ಅಡ್ಡಿ ಪಡಿಸಿದ ಕಾರಣ 11 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಗೊಳಿಸಿದ ಪ್ರಸಂಗವು ಬುಧವಾರ ಇಲ್ಲಿ ನಡೆಯಿತು.

ಅಮಾನತು ಗೊಂಡವರಲ್ಲಿ ಆರು ಜನ ಟಿಆರ್ಎಸ್, ನಾಲ್ಕು ಸಿಪಿಐ ಮತ್ತು ಒಬ್ಬ ಬಿಜೆಪಿ ಶಾಸಕರು ಸೇರಿದ್ದಾರೆ.ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ  ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡಿಸಬೇಕೆಂದು  ಪದೇಪದೇ ಒತ್ತಾಯಿಸುತ್ತಾ  ಕಲಾಪದಲ್ಲಿ ಬಜೆಟ್ ಮಂಡನೆಗೆ ಅಡ್ಡಿಪಡಿಸುತ್ತಿದ್ದರು. ಒಂದು ಸಂದರ್ಭದಲ್ಲಿ ಟಿಆರ್ಎಸ್ ಶಾಸಕರು ಬಜೆಟ್ ಕಾಪಿಯನ್ನು ಕಿತ್ತೆಸೆದ ಪ್ರಸಂಗವೂ ನಡೆಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry