ಶುಕ್ರವಾರ, ನವೆಂಬರ್ 15, 2019
21 °C

ಆಂಧ್ರ ಪ್ರವಾಸಿ ತಾಣ ಅಭಿವೃದ್ಧಿಗೆ ಖಾಸಗಿ ಭಾಗಿತ್ವ

Published:
Updated:

ಬೆಂಗಳೂರು: ಆಂಧ್ರಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿನ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು `ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವ'ದ (ಪಿಪಿಪಿ) ಯೋಜನೆ ರೂಪಿಸಿದ್ದು, ರೂ 1000 ಕೋಟಿ ವಿನಿಯೋಜಿಸಲು ನಿರ್ಧರಿಸಿದೆ.ಉದ್ದೇಶಿತ ಯೋಜನೆಯು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ನೆರವಿನಲ್ಲಿ ಜಾರಿಗೊಳ್ಳಲಿದ್ದು, ಈಗಾಗಲೇ ಕೇಂದ್ರದಿಂದ ರೂ221 ಕೋಟಿ ಅನುದಾನವೂ ಮಂಜೂರಾಗಿದೆ. ರಾಜ್ಯ ಸರ್ಕಾರವೂ ರೂ58 ಕೋಟಿ ಖಾಸಗಿ ಹೂಡಿಕೆ ನಿರೀಕ್ಷಿಸುತ್ತಿದೆ ಎಂದು ಆಂಧ್ರ ಪ್ರವಾಸೋದ್ಯಮ ಮತ್ತು ಪರಂಪರೆ ಇಲಾಖೆ ವಿಶೇಷ ಮುಖ್ಯ ಕಾರ್ಯದರ್ಶಿ ಚಂದನಾ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)