ಆಂಧ್ರ: ಮಳೆಗೆ ಒಂಬತ್ತು ಸಾವು

7

ಆಂಧ್ರ: ಮಳೆಗೆ ಒಂಬತ್ತು ಸಾವು

Published:
Updated:
ಆಂಧ್ರ: ಮಳೆಗೆ ಒಂಬತ್ತು ಸಾವು

ಹೈದರಾಬಾದ್: ನಗರ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೂರು ಮಕ್ಕಳು ಒಳಗೊಂಡಂತೆ 9 ಜನ ಮೃತಪಟ್ಟಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಹಫೀಜ್‌ಪೇಟೆಯ ಆದಿತ್ಯ ನಗರದಲ್ಲಿ ಕಾಂಪೌಂಡ್ ಕುಸಿದು ಮಹಿಳೆ ಸೇರಿದಂತೆ ಮೂರು ಮಕ್ಕಳು ಹಾಗೂ ಬಾಲನಗರದ ಕೈಗಾರಿಕಾ ಪ್ರದೇಶದಲ್ಲಿ ಮಧ್ಯ ಪ್ರದೇಶ ಮೂಲದ ಐದು ಕಾರ್ಮಿಕರು ಮೃತಪಟ್ಟಿರುವುದು ವರದಿಯಾಗಿದೆ.ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ವಿಶಾಖಪಟ್ಟಣದಲ್ಲಿ ಕಾರ್ಖಾನೆಯೊಂದರ ಕಾಪೌಂಡ್ ಗೋಡೆ ಕುಸಿದು. ತಗ್ಗು ಪ್ರದೇಶದ ಕಾಲೊನಿಯ ಮನೆಗಳಿಗೆ ಮಧ್ಯರಾತ್ರಿ ನೀರುನುಗ್ಗಿದ್ದು, ಕಾರು, ಎರಡು ಬೈಕ್‌ಗಳು ಕೊಚ್ಚಿಹೋಗಿವೆ.ರಸ್ತೆಗಳಲ್ಲಿ ನೀರು ತುಂಬಿದ್ದು, ನಗರದ ಹಲವೆಡೆ ವಾಹನ ದಟ್ಟಣೆ ಉಂಟಾಗಿತ್ತು. ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ (ಜಿಎಚ್‌ಎಂಸಿ) ಸತ್ತವವರಿಗೆ ಒಂದು ಲಕ್ಷ ಪರಿಹಾರ ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಹಾನಿಯಾಗದಂತೆ ತಡೆಯಲು ಪುರಸಭೆ ಹಾಗೂ ಕಂದಾಯ ಇಲಾಖೆಗಳು ಸಜ್ಜಾಗಿವೆ ಎಂದು ಮುಖ್ಯಮಂತ್ರಿ ಕಿರಣ್‌ಕುಮಾರ ರೆಡ್ಡಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry