ಆಂಧ್ರ ಸರ್ಕಾರದ ವಿರೋಧಕ್ಕೆ ಹಿನ್ನಡೆ

7
ಸಚಿವರ ವಿರುದ್ಧ ಕಾನೂನು ಕ್ರಮ

ಆಂಧ್ರ ಸರ್ಕಾರದ ವಿರೋಧಕ್ಕೆ ಹಿನ್ನಡೆ

Published:
Updated:

ಹೈದರಾಬಾದ್ (ಐಎಎನ್‌ಎಸ್): ಸಚಿವರಾದ ಧರ್ಮನ ಪ್ರಸಾದ್ ರಾವ್ ಅವರ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ನೀಡಬಾರದು ಎಂದು ಆಂಧ್ರ ರಾಜ್ಯ ಸಚಿವ ಸಂಪುಟ ಕಳುಹಿಸಿದ್ದ ಕಡತವನ್ನು ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರು ವಾಪಸ್ ಕಳುಹಿಸಿದ್ದಾರೆ.

ಈ ವಿಷಯವಾಗಿ ಕಾನೂನು ಅಭಿಪ್ರಾಯ ಪಡೆದ ನಂತರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರನ್ನು ತನಿಖೆಗೆ ಒಳಪಡಿಸಲು ಅನುಮತಿ ನೀಡುವಂತೆ ಸಿಬಿಐ ಕೋರಿಕೆಯನ್ನು 23ರಂದು ರಾಜ್ಯ ಸಚಿವ ಸಂಪುಟ ತಳ್ಳಿ ಹಾಕಿದ್ದು ಈ ನಿರ್ಣಯವನ್ನು ಒಪ್ಪಿಗೆಗಾಗಿ ರಾಜ್ಯಪಾಲರ ಕಳುಹಿಸಿತ್ತು.ಈ ಮಧ್ಯೆ ಸಿಬಿಐ, ನ್ಯಾಯಾಲಯದ ಮೊರೆ ಹೋಗಿ ಸಚಿವ ಧರ್ಮನ ಪ್ರಸಾದ್ ಮತ್ತು ಈಗಾಗಲೇ ಜೈಲಿನಲ್ಲಿರುವ ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರ ಸಮ್ಮತಿ ಅಗತ್ಯವಿಲ್ಲ ಎಂದು ಹೇಳಿದೆ. ಆಗ ರಾಜ್ಯ ಪಾಲರು ಕಡತ ವಾಪಸ್ ಕಳುಹಿಸಿದ್ದು ಬೆಳಕಿಗೆ ಬಂದಿತು ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry