ಆಂಧ್ರ: 8ನೇ ದಿನವೂ ನಡೆಯದ ಕಲಾಪ

7

ಆಂಧ್ರ: 8ನೇ ದಿನವೂ ನಡೆಯದ ಕಲಾಪ

Published:
Updated:

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಗಾಂಣ ರಾಜ್ಯ ರಚನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಪ್ರಸಕ್ತ ಅಧಿವೇಶನದ 8ನೇ ದಿನವಾದ ಸೋಮವಾರವೂ ಕೋಲಾಹಲ ಉಂಟಾಗಿ ಯಾವುದೇ ಕಲಾಪ ನಡೆಯಲಿಲ್ಲ. ಕೊನೆಗೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಕಲಾಪ ಪ್ರಾರಂಭವಾಗುತ್ತಿದ್ದಂತೆ ತೆಲುಗು ದೇಶಂ ಪಕ್ಷದ ಶಾಸಕರು ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಪ್ರಸಕ್ತ ಸಂಸತ್ತಿನಲ್ಲೇ ಪ್ರತ್ಯೇಕ ರಾಜ್ಯ ರಚನೆಯ ಮಸೂದೆ ಮಂಡಿಸಬೇಕೆಂದು  ಆಗ್ರಹಿಸಿ ಗದ್ದಲವೆಬ್ಬಿಸಿದರು.

ಕಲಾಪವನ್ನು ನಡೆಸಿಕೊಂಡು ಹೋಗಲು ಅನುವಾಗುವಂತೆ ಉಪ ಸಭಾಧ್ಯಕ್ಷ ಮನೋಹರ ನದೇಂದ್ಲಾ ಅವರು, ಬೆಳಿಗ್ಗೆ ಎರಡು ಬಾರಿ ಕಲಾಪವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೆ ಗದ್ದಲ ಮತ್ತೆ ಮುಂದುವರೆಯಿತು, ಕೊನೆಗೆ ಉಪಸಭಾಧ್ಯಕ್ಷರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.ಆಡಳಿತ ಪಕ್ಷವಾದ ಕಾಂಗ್ರೆಸ್‌ನ ತೆಲಂಗಾಣ ಶಾಸಕರು ಸಹ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ಸಿಪಿಐ ಶಾಸಕರರೊಂದಿಗೆ ಸೇರಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಬೇಡಿಕೆಗೆ ತಮ್ಮ ಬೆಂಬಲ ಸೂಚಿಸಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯನ್ನೇ ಉದ್ದೇಶವಾಗಿಟ್ಟುಕೊಂಡಿರುವ ~ತೆಲಂಗಾಣ ರಾಷ್ಟ್ರ ಸಮಿತಿ~ಯ ಶಾಸಕರು ಸೋಮವಾರ ಕಲಾಪವನ್ನು ಬಹಿಷ್ಕರಿಸಿದ್ದರು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry