ಆಕರ್ಷಿಸುತ್ತಿರುವ ಸುರಗಾ ಝರಿ

7

ಆಕರ್ಷಿಸುತ್ತಿರುವ ಸುರಗಾ ಝರಿ

Published:
Updated:

ಯಾದಗಿರಿ: ತಾಲ್ಲೂಕಿನ ಕೊಟಗೇರಾ ಗ್ರಾಮದ ಬೆಟ್ಟದಲ್ಲಿ ಹರಿಯುತ್ತಿರುವ ಸುರಗಾ ಝರಿ ಜನರನ್ನು ಆಕರ್ಷಿಸುತ್ತಿದೆ.ಕಳೆದ 2–3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಟ್ಟ ಹಸಿರು ಬೆಟ್ಟಗಳ ಮಧ್ಯೆ ಸುರಗಾ ಝರಿ ಹರಿಯುತ್ತಿದ್ದು, ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ.ಬೆಟ್ಟದ 20 ಅಡಿ ಎತ್ತರದಿಂದ ಧುಮುಕುವ ನೀರು ನೋಡುಗರ ಕಣ್ಮನ ಸೆಳೆಯುತ್ತಿದೆ. ಮಳೆಗಾಲದಲ್ಲಿ ಚೆನ್ನಾಗಿ ಮಳೆ ಬಂದರೆ ಮಾತ್ರ ಸುರಗಾ ಝರಿ ತುಂಬಿ ಧುಮಕುತ್ತದೆ.ಕೆಳಗಡೆ ಸಣ್ಣ ನೀರಾವರಿ ಇಲಾಖೆ ಅಣೆಕಟ್ಟು ನಿರ್ಮಾಣ ಮಾಡಿ­ರುವುದರಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ದನಕರುಗಳಿಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದು ಗ್ರಾಮದ ರೈತ ಗಂಗಾಧರ ಸಾಹುಕಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry