ಆಕಸ್ಮಿಕ ಬೆಂಕಿ: ಗುಡಿಸಲು ಸಂಪೂರ್ಣ ಭಸ್ಮ

7

ಆಕಸ್ಮಿಕ ಬೆಂಕಿ: ಗುಡಿಸಲು ಸಂಪೂರ್ಣ ಭಸ್ಮ

Published:
Updated:

ನಾಗಮಂಗಲ: ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಗುಡಿಸಲೊಂದು ಸಂಪೂರ್ಣ ಆಹುತಿಯಾದ ಘಟನೆ ಗುರುವಾರ ತಾಲ್ಲೂಕಿನ ಶಿಕಾರಿಪುರ ದಲ್ಲಿ ಜರುಗಿದೆ.ಗ್ರಾಮದ ಹಕ್ಕಿ ಪಿಕ್ಕಿ ಜನಾಂಗದ ಕುಳಬ ಬಿನ್ ಮಂತ್ರೋಜಿಯ ಸಹೋದರ ಕೇಸರಿ ಎಂಬುವವನ ಗುಡಿಸಲಿಗೆ ಬೆಂಕಿ ಬಿದ್ದಿದೆ. ಅಕ್ಕ ಪಕ್ಕದ ಗುಡಿಸಲಿನವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋ ಜನವಾಗಿಲ್ಲ. ಅಗ್ನಿಶಾಮಕ ದಳದವರು ಬರುವ ವೇಳೆಗೆ ಗುಡಿಸಲು ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ವ್ಯಾಪಾರಕ್ಕೆಂದು ತಂದಿದ್ದ 50 ಸಾವಿರ ರೂ ಬೆಲೆಯ ಅಲಂಕಾರಿಕ ಹೂವಿನ ಸಾಮಗ್ರಿಗಳು, ಆಹಾರ ಪದಾರ್ಥ ಗಳು, 5 ಸಾವಿರ ನಗದು ಸೇರಿ 1 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಗುಡಿಸಲಿಗೆ ಬೆಂಕಿ ಬಿದ್ದ ವೇಳೆ ಕೇಸರಿ ಹಾಗೂ ಕುಟುಂಬದವರು ಒಳಗೆ ಇದ್ದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 7 ಜನ ಸದಸ್ಯರ ಕೇಸರಿ ಕುಟುಂಬ ಮನೆ ಕಳೆದುಕೊಂಡು ಬೀದಿ ಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ತುಪ್ಪದ ಮಡು ಗ್ರಾಮ ಪಂಚಾಯಿತಿ ಪಿಡಿಒ ಗಂಗಾಧರ್ ತಾತ್ಕಾಲಿಕವಾಗಿ ಕುಟುಂಬಕ್ಕೆ ನೆರವು ನೀಡಿದ್ದು, ಪಂಚಾ ಯ್ತಿ ವತಿಯಿಂದ ತುರ್ತಾಗಿ ವಿಶೇಷ ಆದ್ಯತೆ ಮೇರೆಗೆ ಕುಟುಂಬಕ್ಕೆ ಮನೆ ನೀಡಲಾಗುವುದು ಎಂದು ತಿಳಿಸಿದರು.ಘಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಮಹದೇವಮ್ಮ, ರಾಜಸ್ವ ನಿರೀಕ್ಷಕ ಮಲ್ಲಿಕಾರ್ಜುನ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು ನವರಂಗ್ ಆಗಮಿಸಿ ಪರಿಶೀಲಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry