ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ 29 ಆಟೊಗಳು

7

ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ 29 ಆಟೊಗಳು

Published:
Updated:

ಮೈಸೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಶೆಡ್‌ನಲ್ಲಿ ನಿಲ್ಲಿಸಿದ್ದ 29 ಆಟೊಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿ ರುವ ಘಟನೆ ಉದಯಗಿರಿಯಲ್ಲಿ ಬುಧವಾರ ನಡೆದಿದೆ.ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೀಡಿ ಕಾಲೋನಿಯ ತಬ್ರೇಜ್‌ಗೆ ಸೇರಿದ ಶೆಡ್‌ನ ಒಂದು ಭಾಗದಲ್ಲಿ 6 ಗೂಡ್ಸ್ ಆಟೊಗಳು ಸೇರಿದಂತೆ 33 ಆಟೋಗಳನ್ನು ನಿಲ್ಲಿಸಲಾಗಿತ್ತು. ಈ ಪೈಕಿ 29 ಆಟೋಗಳು ಸುಟ್ಟು ಕರಕಲಾಗಿವೆ.ಬುಧವಾರ ಮುಂಜಾನೆ 2.45 ರ ಸುಮಾರಿನಲ್ಲಿ ಆಟೊಗಳು ನಿಂತಿದ್ದ ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ ಎಲ್ಲೆಡೆ ಆವರಿಸಿತು. ಕೂಡಲೇ ಎಚ್ಚೆತ್ತು ಕೊಂಡ ಶೆಡ್‌ನ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದರು. ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry