ಶುಕ್ರವಾರ, ಫೆಬ್ರವರಿ 26, 2021
27 °C
ಮಾಜಿ ಶಾಸಕ ಜೆ.ನರಸಿಂಹ ಸ್ವಾಮಿ ಸ್ಪಷ್ಟನೆ

ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿ ದೊಡ್ಡದಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿ ದೊಡ್ಡದಿದೆ

ದೊಡ್ಡಬಳ್ಳಾಪುರ: ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಟಿಕೇಟ್‌ ದೊರೆಯದವರು ಯಾರೂ ಭಿನ್ನಮತೀಯ ಕೆಲಸ ಮಾಡದೆ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಜೆ.ನರಸಿಂಹ ಸ್ವಾಮಿ ಹೇಳಿದರು.ಅವರು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಆಕಾಂಕ್ಷಿಗಳ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರದಲ್ಲಿನ ನರೇಂದ್ರ ಮೋದಿ ಆಡಳಿತವನ್ನು ಮೆಚ್ಚಿರುವ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಅವರು ಹೇಳಿದರು.ಪೂರ್ವಬಾವಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಪುಷ್ಪಶಿವಶಂಕರ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಂ.ಕೆ.ವತ್ಸಲಾ, ತಾಲ್ಲೂಕು ಅಧ್ಯಕ್ಷ ಬಿ.ಆರ್‌. ಅಶ್ವತ್ಥನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎನ್‌. ಹನುಮಂತೇಗೌಡ, ಮುಖಂಡರಾದ ಟಿ.ವಿ. ಲಕ್ಷ್ಮೀನಾರಾಯಣ್‌, ಕೆ.ಎಂ. ಹನುಮಂತರಾಯಪ್ಪ, ಜೋ.ನ. ಮಲ್ಲಿಕಾರ್ಜುನ್‌, ಕೆ.ಎಂ.ಕೃಷ್ಣಮೂರ್ತಿ, ಜೆ.ವೈ. ಮಲ್ಲಪ್ಪ, ಮಂಜುನಾಥ್‌ ಮತ್ತಿತರರು ಹಾಜರಿದ್ದರು.ಘೋಷಣೆಯಾಗದ ಅಭ್ಯರ್ಥಿಗಳು: ಸಾಸಲು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಜಿ.ರೇಖಾಶಿವಾನಂದ, ಮಂಜುಳಾ ಡಿ.ನಾಗರಾಜ್‌, ಮಂಜುಳಾ ಜಿ.ತಿಮ್ಮೇಗೌಡ. ಕನಸವಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಟಿ.ಎನ್‌. ನಾಗರಾಜ್‌, ಆನಂದಮೂರ್ತಿ, ಎಂ.ಚಿ. ಚಂದ್ರಶೇಖರ್‌, ಮುನಿಕೃಷ್ಣಪ್ಪ ಆಕಾಂಕ್ಷಿಗಳಾಗಿರುವುದರಿಂದ ಅಧಿಕೃತ ಅಭ್ಯರ್ಥಿಗಳ ಘೋಷಣೆ ಯಾಗಿಲ್ಲ.ಬಿಜೆಪಿ ಅಭ್ಯರ್ಥಿಗಳು

ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಗಳಾಗಿ ದರ್ಗಾಜೋಗಹಳ್ಳಿ ನಾಗರತ್ನ ನಾರಾಯಣಸ್ವಾಮಿ, ರಾಜಘಟ್ಟ ಉಷಾ ನರಸಿಂಹಮೂರ್ತಿ, ದೊಡ್ಡಬೆಳವಂಗಕಳ ಕೆ.ಎಂ. ಮಹಾದೇವಿ ಚನ್ನಪ್ಪ,ತೂಬಗೆರೆ ಎನ್‌. ಅರವಿಂದ್‌ ಹೆಸರುಗಳು ಅಂತಿಮಗೊಂಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.