ಆಕಾಶದಿಂದ ಬಿದ್ದ ದೇಹದ ಭಾಗಗಳು!

7

ಆಕಾಶದಿಂದ ಬಿದ್ದ ದೇಹದ ಭಾಗಗಳು!

Published:
Updated:

ಜೆಡ್ಡಾ (ಎಎಫ್‌ಪಿ): ಮಾನವನ ದೇಹದ ವಿವಿಧ ಭಾಗಗಳು ಆಕಾಶದಿಂದ  ಕೆಳಕ್ಕೆ ಬಿದ್ದ ಕುತೂಹಲಕಾರಿ ಘಟನೆ ಸೋಮವಾರ ಜೆಡ್ಡಾದಲ್ಲಿ ನಡೆದಿದೆ. ವಿಮಾನದ ಚಕ್ರದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯ ಶವದ ಭಾಗಗಳು ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ದೇಶದ ಗಡಿಯನ್ನು ದಾಟುವ ಉದ್ದೇಶದಿಂದ ಕೆಲವರು ಹೆಚ್ಚಿನ ಭದ್ರತೆಗಳಿಲ್ಲದ ವಿಮಾನ ನಿಲ್ದಾಣಗಳಿಗೆ ತೆರಳಿ, ವಿಮಾನಗಳ ಲ್ಯಾಂಡಿಂಗ್‌ ಗೇರ್‌ನ ಗೂಡಿನಲ್ಲಿ ಕುಳಿತು­ಕೊಳ್ಳು­ತ್ತಾರೆ. ಈ ದುಸ್ಸಾಹಸಕ್ಕೆ ಕೈಹಾಕಿದವ­ರಲ್ಲಿ ಕೆಲವರು ಬದುಳಿದರೆ ಇನ್ನು ಕೆಲವರು ಪ್ರಾಣ ಕಳೆದು­ಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry