ಆಕಾಶವಾಣಿ ಸಂಗೀತದ ಮನೆ: ಡಾ.ದೊರೆ

7

ಆಕಾಶವಾಣಿ ಸಂಗೀತದ ಮನೆ: ಡಾ.ದೊರೆ

Published:
Updated:

ಮೈಸೂರು: ಆಕಾಶವಾಣಿ ಎಂದರೆ ಸಂಗೀತ. ಸಂಗೀತಕ್ಕೂ ಆಕಾಶವಾಣಿಗೂ ಅವಿನಾಭಾವ ಸಂಬಂಧವಿದೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಹೇಳಿದರು.ನಗರದ ಸೆನೆಟ್ ಭವನದಲ್ಲಿ ಆಕಾಶವಾಣಿ ಹಬ್ಬದ ಅಂಗವಾಗಿ ಭಾನುವಾರ ನಡೆದ `ಅರಮನೆ ಸಂಗೀತ ವೈಭವ~ ಕಾರ್ಯಕ್ರಮವನ್ನು ಉದ್ಘಾ ಟಿಸಿ  ಮಾತನಾಡಿದ ಅವರು ಆಕಾಶ ವಾಣಿ ಸಂಗೀತದ ಮನೆ. ಇದು ಸಂಗೀತ ಗಾರರಿಗೆ ತವರು ಮನೆಯಂತಾಗಿದೆ ಎಂದು ಅಭಿಪ್ರಾಯಪಟ್ಟರು.ಸಂಗೀತದ ಬೆಳವಣಿಗೆಯಲ್ಲಿ ಅನೇಕ ಸಂಘಸಂಸ್ಥೆಗಳು, ಅಕಾಡೆಮಿಗಳು ಶ್ರಮಿಸುತ್ತಿವೆ. ಅವುಗಳಲ್ಲಿ ಆಕಾಶವಾಣಿ ಸಂಗೀತವನ್ನು ವಿಫುಲವಾಗಿ ಬೆಳೆಸಿದೆ.  ಆರಂಭದಲ್ಲಿ ಸುದ್ದಿಗೆ ಸೀಮಿತವಾಗಿದ್ದ ಆಕಾಶವಾಣಿ ನಂತರದ ದಿನಗಳಲ್ಲಿ ಸಂಗೀತವನ್ನು ಪೋಷಿಸಿ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.  ಕಲಾವಿದನ ಶ್ರೇಣಿಯನ್ನು ಖಚಿತವಾಗಿ ಗುರುತಿಸುವುದು ಆಕಾಶವಾಣಿಯಿಂದ ಮಾತ್ರ ಸಾಧ್ಯ ಎಂದರು.ಕಲಾವಿದರಿಗೆ ಆಕಾಶವಾಣಿ ಗ್ರೇಡ್‌ಗಳನ್ನು ನೀಡುತ್ತಿದ್ದು, ಇದು ಇತರೆ ಪಾರಿತೋಷಕಗಳಂತೆ ಭ್ರಷ್ಟಗೊಂಡಿಲ್ಲ. ಆಕಾಶವಾಣಿ ಇಂದಿಗೂ ಸಹ ತನ್ನ ಘನತೆ ಗಾಂಭೀರ್ಯ ಉಳಿಸಿಕೊಂಡು ಬಂದಿದೆ. 57 ವರ್ಷದಿಂದ ಭಕ್ತಿಗೀತೆ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತವನ್ನು ಬಿತ್ತರಿಸುತ್ತಿದ್ದು, ವಿಶೇಷ ಸಂಗೀತವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಇಂದಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳು ಇತ್ತ ಸ್ವದೇಶಿಯೂ ಅಲ್ಲ, ವಿದೇಶಿಯೂ ಅಲ್ಲದಂತಾಗಿವೆ. ತಂಬೂರಿ ನಮಗೆ ತಾಯಿ ಇದ್ದ ಹಾಗೆ. ತಾಯಿಯ ಆಶೀರ್ವಾದಿಂದ ನಾವು ಏನು ಬೇಕಾದರೂ ಸಾಧಿಸಬಹುದು. ಇಂತಹ ತಂಬೂರಿಯನ್ನು ಉಳಿಸಿಕೊಂಡ ಏಕೈಕ ಸಂಸ್ಥೆ ಆಕಾಶವಾಣಿ ಎಂದು ಶ್ಲಾಘಿಸಿದರು.ಮೈಸೂರು ಆಕಾಶವಾಣಿ ಸಂಗೀತ ಹಬ್ಬ ಆಚರಿಸಿಕೊಳ್ಳುತ್ತಿರುವುದು ಸಮರ್ಥ, ಮೈಸೂರು ಆಕಾಶವಾಣಿ ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದು, 10ಕ್ಕೂ ಹೆಚ್ಚು ಬಾರಿ ರಾಜ್ಯಪ್ರಶಸ್ತಿ ಪಡೆದಿದೆ. ಎಐಆರ್‌ಗೆ ಆಕಾಶವಾಣಿ ಹೆಸರು ನೀಡಿದ ಕೀರ್ತಿ ಮೈಸೂರಿನ ಎಂ.ಗೋಪಾಲಸ್ವಾಮಿ ಅವರಿಗೆ ಸಲ್ಲಬೇಕು ಎಂದರು.ಆಕಾಶವಾಣಿ ನಿಲಯ ನಿರ್ದೇಶಕಿ ನಿರ್ದೇಶಕಿ ಡಾ.ವಿಜಯಾಹರನ್ ಸ್ವಾಗ ತಿಸಿದರು. ನಿಲಯದ ತಾಂತ್ರಿಕ ನಿರ್ದೇ ಶಕ ವಿ.ಶ್ರೀನಿವಾಸನ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry