ಆಕಾಶ್-2ನ.11ಕ್ಕೆ ಬಿಡುಗಡೆ

7

ಆಕಾಶ್-2ನ.11ಕ್ಕೆ ಬಿಡುಗಡೆ

Published:
Updated:

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ, ಅತ್ಯಂತ ಕಡಿಮೆ ಬೆಲೆಯ, ಸುಧಾರಿತ ಮತ್ತು ಹೆಚ್ಚುವರಿ ಸೌಲಭ್ಯ ಒಳಗೊಂಡ `ಆಕಾಶ್-2~ ಟ್ಯಾಬ್ಲೆಟ್ ನವೆಂಬರ್ 11ರಂದು ಪರಿಚಯಿಸಲಾಗುತ್ತಿದೆ ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಸೋಮವಾರ ಇಲ್ಲಿ ತಿಳಿಸಿದರು.ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಈ ರೂ 1750 (35 ಡಾಲರ್) ಕಡಿವೆು ಬೆಲೆಯ `ಆಂಡ್ರಾಯ್ಡ-4~ ಕಾರ್ಯನಿರ್ವಹಣೆ ವ್ಯವಸ್ಥೆ ಒಳಗೊಂಡ ಟ್ಯಾಬ್ಲೆಟ್,  ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಿದ್ದಾರೆ. `ಆಕಾಶ್-2~ ಟ್ಯಾಬ್ಲೆಟ್ ವ್ಯಾಪಕವಾಗಿ ಬಳಕೆಗೆ ಬಂದರೆ ಶಾಲಾ ಮಕ್ಕಳು ಪಠ್ಯಪುಸ್ತಕಗಳ ಹೊರೆ ಇಲ್ಲದೇ ಶಾಲೆಗೆ ತೆರಳಬಹುದು. ಕಲಿಕೆಗೆ ಹೊಸ ಆಯಾಮ ಸಿಗಲಿದೆ ಎಂದರು.ಆರ್ಥಿಕ ಸಂಪಾದಕರ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, 50 ಲಕ್ಷದಷ್ಟು ಇಂತಹ ಟ್ಯಾಬ್ಲೆಟ್ ತಯಾರಿಸಲು ನಿರ್ಧರಿಸಲಾಗಿದೆ. ಹಣಕಾಸು ಇಲಾಖೆಯ ಸಮ್ಮತಿ ಸಿಕ್ಕರೆ 2013ರ ಹೊತ್ತಿಗೆ 1.10 ಕೋಟಿ ಟ್ಯಾಬ್ಲೆಟ್ ತಯಾರಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಉದ್ದೇಶಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry