ಆಕ್ಷೇಪಾರ್ಹ ಜಾಹೀರಾತು ಪ್ರಸಾರ: ಕಠಿಣ ಕ್ರಮ

7

ಆಕ್ಷೇಪಾರ್ಹ ಜಾಹೀರಾತು ಪ್ರಸಾರ: ಕಠಿಣ ಕ್ರಮ

Published:
Updated:

ನವದೆಹಲಿ (ಪಿಟಿಐ): ಆಕ್ಷೇಪಾರ್ಹ ಜಾಹೀರಾತುಗಳನ್ನು ಪ್ರಸಾರ ಮಾಡುವ ಟಿ.ವಿ ವಾಹಿನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ವಿಷಯದಲ್ಲಿ ಸಂಸದರು ಬೆಂಬಲ ನೀಡಬೇಕು ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಮನವಿ ಮಾಡಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಈ ಮನವಿ ಮಾಡಿರುವ ಸೋನಿ, `ಮಹಿಳೆಯರ ಗೌರವಕ್ಕೆ ಚ್ಯುತಿ ಉಂಟುಮಾಡುವ ಕೆಲವು ಅರ್ಥಹೀನ ಜಾಹೀರಾತು ಪ್ರಸಾರ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ~ ಎಂದರು.

`ಟಿ.ವಿ, ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗುವ ವಿಷಯಗಳನ್ನು ಪರಿಶೀಲಿಸಲು 15 ವಿವಿಧ ಕಾನೂನುಗಳಿವೆ. ಪ್ರಮಾದವನ್ನುಂಟುಮಾಡುವ ಕೆಲವು ಮಾಧ್ಯಮಗಳಿಗೆ ಜಾಹೀರಾತು ನೀಡುವ ಮೂಲಕ ಸರ್ಕಾರ ತೀವ್ರ ನಿಂದನೆಗೆ ಗುರಿಯಾದ ಸಂದರ್ಭಗಳೂ ಸಾಕಷ್ಟಿವೆ. ಕಾನೂನಿನ ಮಿತಿಯಲ್ಲಿಯೇ ನಾನು ಕೆಲಸ ನಿರ್ವಹಿಸಬೇಕಾದ್ದರಿಂದ ಯಾವುದೇ ವಾಹಿನಿ ಅಥವಾ ಪತ್ರಿಕೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲು ಸಾಧ್ಯವಿಲ್ಲ. ಸಂಸದರು ಬೆಂಬಲಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಹಕರಿಸಬೇಕು~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry