ಆಕ್ಷೇಪಾರ್ಹ ಸಂಗತಿ ತಡೆಗೆ: ಆಗ್ರಹ

7

ಆಕ್ಷೇಪಾರ್ಹ ಸಂಗತಿ ತಡೆಗೆ: ಆಗ್ರಹ

Published:
Updated:

ನವದೆಹಲಿ (ಪಿಟಿಐ): ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷ­ಯ­ಗಳ ಪ್ರಕಟಣೆ ತಡೆಗೆ ಚುನಾವಣಾ ಆಯೋಗ ಪರಿಣಾಮಕಾರಿ ಕ್ರಮ ಕೈಗೊ­ಳ್ಳ­ಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ.ವೈಯಕ್ತಿಕವಾಗಿ ಮತ್ತು ಕೆಲವು ಗುಂಪುಗಳು ಸಾಮಾಜಿಕ ಜಾಲತಾಣ­ಗಳನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ಪ್ರತಿಸ್ಪರ್ಧಿಗಳ ಚಾರಿತ್ರ್ಯ ವಧೆ ಮಾಡುತ್ತಿವೆ ಎಂದು ಪಕ್ಷವು ಆಯೋಗಕ್ಕೆ ಬರೆದ ಪತ್ರದಲ್ಲಿ ಆರೋಪಿಸಿದೆ.‘ಜಾಲತಾಣಗಳ ದುರ್ಬಳಕೆಯಿಂದ  ಮುಕ್ತ ಮತ್ತು ನ್ಯಾಯಸಮ್ಮತ ಚುನಾ­ವಣೆಗೆ ಅಡ್ಡಿಯಾಗಬಹುದು. ಆದಕಾ­ರಣ ಆಕ್ಷೇಪಾರ್ಹ ಸಂಗತಿಗಳ ತಡೆಗೆ ಪರಿಣಾಮಕಾರಿ ನಿಯಮಗಳನ್ನು ಜಾರಿಗೊಳಿ­ಸುವಂತೆ’ ಎಐಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಕೆ.ಸಿ. ಮಿತ್ತಲ್‌ ಅವರು ಚುನಾವಣಾ ಆಯೋ­ಗದ ಮುಖ್ಯ ಆಯುಕ್ತ ವಿ.ಎಸ್‌. ಸಂಪತ್‌ ಅವರಿಗೆ ಪತ್ರ ಬರೆದಿದ್ದಾರೆ.ಯುಪಿಎ ಸರ್ಕಾರದ ವಿರುದ್ಧ ನರೇಂದ್ರ ಮೋದಿ ಅವರು ಅಂತರ್ಜಾಲ ತಾಣಗಳನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಯೋಗಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry